50 ದಿನಗಳಲ್ಲಿ 15 ರಾಜ್ಯಗಳಿಗೆ 30,182 ಟನ್ ಆಮ್ಲಜನಕ ತಲುಪಿಸಿದ ‘ಆಕ್ಸಿಜನ್ ಎಕ್ಸ್ ಪ್ರೆಸ್’

Update: 2021-06-13 14:08 GMT

ಹೊಸದಿಲ್ಲಿ,ಜೂ.13: ಭಾರತೀಯ ರೈಲ್ವೆಯು ಕಳೆದ 50 ದಿನಗಳಲ್ಲಿ 1,734ಕ್ಕೂ ಅಧಿಕ ಟ್ಯಾಂಕರ್ಗಳ ಮೂಲಕ ದೇಶಾದ್ಯಂತ 15 ರಾಜ್ಯಗಳಿಗೆ 30,182 ಟನ್ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ಮೂಲಕ ಮೈಲಿಗಲ್ಲೊಂದನ್ನು ಸಾಧಿಸಿದೆ.

ಈ ಅವಧಿಯಲ್ಲಿ 421 ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್,‌ ಕೇರಳ, ದಿಲ್ಲಿ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಜಾರ್ಖಂಡ್ ರಾಜ್ಯಗಳ 39 ನಗರಗಳನ್ನು ತಲುಪುವ ಮೂಲಕ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ಆಂಧ್ರಪ್ರದೇಶ (3,600 ಟ.),ಕರ್ನಾಟಕ (3,700 ಟ.) ಮತ್ತು ತಮಿಳುನಾಡು (4,900 ಟ.) ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ 15,000 ಟನ್ ಗೂ ಅಧಿಕ ದ್ರವ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿವೆ.

ಅಗತ್ಯವಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವುದಕ್ಕೆ ತಾನು ಶ್ರಮಿಸುತ್ತಿರುವುದಾಗಿ ಭಾರತೀಯ ರೈಲ್ವೆಯು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News