×
Ad

ತಿರುಚಲ್ಪಟ್ಟ ನಂಬರ್‌, ವಿಳಾಸಗಳು: ಕುಂಭಮೇಳದಲ್ಲಿ ಪಾಲ್ಗೊಂಡವರ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್‌ ವರದಿ ನಕಲಿ !

Update: 2021-06-15 16:21 IST

ಹರಿದ್ವಾರ: ಇಲ್ಲಿನ ಕುಂಭಮೇಳದ ಸಂದರ್ಭದಲ್ಲಿ ನಾಲ್ಕು ಲಕ್ಷ ಕೋವಿಡ್‌ ಪರೀಕ್ಷೆಗಳನ್ನು ನಡೆಸಿದ್ದು, ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ವರದಿಗಳು ನಕಲಿಯಾಗಿವೆ ಎಂದು ತಿಳಿದು ಬಂದಿದೆ. ಉತ್ತರಾಖಂಡದ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಖಾಸಗಿ ಏಜೆನ್ಸಿ ಮುಖಾಂತರ ಈ ಪರೀಕ್ಷೆಗಳನ್ನು ನಡೆಸಲಾಗಿತ್ತು ಎಂದು ವರದಿಯಾಗಿದೆ.

ತನಿಖಾ ವರದಿಯನ್ನು ಪರಿಶೀಲಿಸಿದ timesofindia, ಹಲವಾರು ಹೆಸರುಗಳು, ವಿಳಾಸಗಳು ಮತ್ತು ಮೊಬೈಲ್‌ ಸಂಖ್ಯೆಗಳು ನಕಲಿಯಾಗಿವೆ ಎಂದು ತಿಳಿಸಿದೆ. ಒಂದೇ ಫೋನ್‌ ನಂಬರ್‌ ಅನ್ನು 50 ಮಂದಿಯ ವರದಿಯಲ್ಲಿ ಬಳಸಲಾಗಿದೆ. 

ಕೆಲವು ವಿಳಾಸ ಮತ್ತು ಹೆಸರುಗಳನ್ನೂ ತಿರುಚಲಾಗಿದೆ. 530 ಸ್ಯಾಂಪಲ್‌ ಗಳಲ್ಲಿ ʼಹೌಸ್‌ ನಂಬರ್‌ 5ʼ ಎಂದು ಬರೆಯಲಾಗಿದೆ. ಒಂದೇ ಮನೆಯಲ್ಲಿ 500 ಸದಸ್ಯರಿರುವುದು ಸಾಧ್ಯವೇ ಎಂದು ವರದಿ ಪ್ರಶ್ನಿಸಿದೆ. ಕೆಲವು ವಿಚಿತ್ರ ವಿಳಾಸಗಳನ್ನೂ ನೀಡಲಾಗಿದ್ದು, ಹೌಸ್‌ ನಂಬರ್‌ 56, ಅಲಿಗಢ್‌, ಹೌಸ್‌ ನಂಬರ್‌ 76 ಮುಂಬೈ ಮುಂತಾದ ವಿಳಾಸ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಾನ್ಪುರ, ಮುಂಐ. ಅಹ್ಮದಾಬಾದ್‌ ವಿಳಾಸವಿರುವ ಅನೇಕರ ವರದಿಯಲ್ಲಿ ಒಂದೇ ಫೋನ್‌ ನಂಬರ್‌ ಪತ್ತೆಯಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News