ಸಿ.ಎನ್. ಶೆಟ್ಟಿ

Update: 2021-06-17 10:02 GMT

ಸುರತ್ಕಲ್ : ಬ್ರಹ್ಮಾವರ ಚೇರ್ಕಾಡಿ ನಿವಾಸಿ ಸಿ.ಎನ್. ಶೆಟ್ಟಿ (88) ಅವರು ಅಲ್ಪ ಕಾಲದ ಅಸೌಖ್ಯದಿಂದ ಸುರತ್ಕಲ್  ಕಡಂಬೋಡಿಯಲ್ಲಿರುವ ತನ್ನ ನಿವಾಸದಲ್ಲಿ ಬುಧವಾರ ನಿಧನರಾದರು.

ಮೃತರು ಇಬ್ಬರು ಪುತ್ರಿಯರನ್ನು, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರು ಬೈಕಂಪಾಡಿಯಲ್ಲಿ ವೆಸ್ಟ್ ಕೋಸ್ಟ್ ಡ್ರಗ್ಸ್ ಸಂಸ್ಥೆಯ ಮಾಲಕರಾಗಿದ್ದರು.

ಬೈಕಂಪಾಡಿ ಸಣ್ಣ ಕೈಗಾರಿಕಾ  ಸಂಘದ  ಮಾಜೀ ಅಧ್ಯಕ್ಷರಾಗಿದ್ದ ಇವರು  ಸುರತ್ಕಲ್ ಬಂಟರ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು. ಅನೇಕ ಸೇವಾ ಸಂಘ ಸಂಸ್ಥೆಗಳಲ್ಲಿ ಇವರು ತನ್ನನ್ನು ತೊಡಗಿಸಿಕೊಂಡಿದ್ದರು. ಸಿ.ಎನ್. ಶೆಟ್ಟಿ ಅವರ ನಿಧನಕ್ಕೆ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ