ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ಹಗರಣ ಆರೋಪ: ಹೈಕೋರ್ಟ್ ಗೆ ಸಿಐಡಿಯಿಂದ ತನಿಖಾ ವರದಿ ಸಲ್ಲಿಕೆ

Update: 2021-06-17 18:14 GMT

ಬೆಂಗಳೂರು, ಜೂ.17: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ಗೆ ತನಿಖಾ ವರದಿಯನ್ನು ಸಲ್ಲಿಸಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಸರಕಾರಿ ವಕೀಲರು, ಸಿಐಡಿ ನೀಡಿದ್ದ ನೀಡಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.

ವರದಿ ದಾಖಲಿಸಿಕೊಂಡ ಪೀಠ, ಬ್ಯಾಂಕ್‍ನ ಆಡಳಿತಾಧಿಕಾರಿ ಸಲ್ಲಿಸಿರುವ ವರದಿ ಪ್ರತಿಯನ್ನು ಎಲ್ಲ ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ಸಲ್ಲಿಸುವಂತೆ ಸೂಚಿಸಿತು. ಆರ್ ಬಿಐ ಪರ ವಕೀಲರು ಮಾಹಿತಿ ನೀಡಿ, ಸೌಹಾರ್ದ ಕಾಯಿದೆ ಸೆಕ್ಷನ್ 17ರ ಪ್ರಕಾರ ಸರಕಾರ ಆಡಳಿತಾಧಿಕಾರಿಗೆ ಕೆಲ ಅಧಿಕಾರಗಳನ್ನು ನೀಡಬಹುದು ಎಂದರು.

ಈ ಕುರಿತು ಮುಂದಿನ ವಿಚಾರಣೆ ವೇಳೆ ಸಮಗ್ರ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠ ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News