ಮಾಂಸದ ಬೆಲೆ: ಬಿಜೆಪಿಯ ಪಶು ರಕ್ಷಣೆ ರಾಜಕೀಯದಲ್ಲಿನ ಅನುಕೂಲಕರ ವಿರೋಧಾಭಾಸಗಳು

Update: 2021-06-19 07:02 GMT
ಸಾಂದರ್ಭಿಕ ಚಿತ್ರ (PTI)

2014,ಎ.2ರಂದು ಆಗಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಧಾನಿ ಹುದ್ದೆಯ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ನೆವಡಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದರು. ಗೋವುಗಳನ್ನು ಸಾಕುವ ಮತ್ತು ಅವುಗಳ ಸೇವೆಯನ್ನು ಮಾಡುವ, ಶ್ರೀಕೃಷ್ಣನನ್ನು ಆರಾಧಿಸುವ ಯದುವಂಶಿಗಳು ಇಂದು ಯಾರೊಂದಿಗಿದ್ದಾರೆ ಎಂದು ಮೋದಿ ಪ್ರಶ್ನಿಸಿದ್ದರು. ಯದುವಂಶಿಗಳು ಎಂದು ಅವರು ಯಾದವ ಸಮುದಾಯವನ್ನು ಪ್ರಸ್ತಾಪಿಸಿ ಹೇಳಿದ್ದರು. ಜಾನುವಾರುಗಳನ್ನು ಸಾಕುವುದು ಈ ಸಮುದಾಯದ ಕುಲವೃತ್ತಿಯಾಗಿದ್ದು, ಬಿಹಾರದಲ್ಲಿ ಆರ್‌ಜೆಡಿ ಮತ್ತು ಉತ್ತರ ಪ್ರದೇಶದಲ್ಲಿ ಎಸ್‌ಪಿಯ ನಿರ್ಣಾಯಕ ಮತಬ್ಯಾಂಕ್‌ಗಳಾಗಿದ್ದಾರೆ. ಮುಸ್ಲಿಂ ಮತದಾರರನ್ನು ಓಲೈಸುತ್ತಿರುವುದಕ್ಕಾಗಿ ಸಮಾಜವಾದಿ ಪಕ್ಷವನ್ನು ಮೋದಿ ಗುರಿಯಾಗಿಸಿಕೊಂಡಿದ್ದರು ಎಂಬಂತೆ ಕಂಡುಬಂದಿತ್ತು.

ಪಶು ರಕ್ಷಣೆಗೆ ಚುನಾವಣಾ ವಿಷಯವಾಗಿ ಒತ್ತು ನೀಡಿದ್ದ ಮೋದಿ, ‘ಸೋದರರೇ ಮತ್ತು ಸೋದರಿಯರೇ, ದಿಲ್ಲಿಯಲ್ಲಿರುವ ಸರಕಾರಕ್ಕೆ ಹಸಿರು ಕ್ರಾಂತಿಯೂ ಬೇಕಿಲ್ಲ, ಶ್ವೇತಕ್ರಾಂತಿಯೂ ಬೇಕಿಲ್ಲ. ಅವರಿಗೆ ಬೇಕಿರುವುದು ಪಿಂಕ್ ಅಥವಾ ಗುಲಾಬಿ ಕ್ರಾಂತಿ ಮಾತ್ರ’ ಎಂದು ಹೇಳಿದ್ದರು. ಗುಲಾಬಿ ಕ್ರಾಂತಿಯನ್ನು ಉಲ್ಲೇಖಿಸುವ ಮೂಲಕ ವಧೆಗೊಳಗಾದ ನಂತರ ಪ್ರಾಣಿಯ ಮಾಂಸದ ಬಣ್ಣವನ್ನು ಅವರು ಸೂಚಿಸಿದ್ದರು. ‘ಹಿಂದಿನ ವರ್ಷದಲ್ಲಿ ಮಟನ್ ಅನ್ನು ರಫ್ತುಮಾಡುವ ಮೂಲಕ ಭಾರತವು ಅತ್ಯಧಿಕ ಲಾಭವನ್ನು ಗಳಿಸಿದೆ’ ಎಂಬ ‘ಹೆಮ್ಮೆಯ ಹೇಳಿಕೆ’ಗಾಗಿ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಟೀಕಿಸಿದ್ದರು. ‘ನನ್ನ ಯದುವಂಶಿ ಸೋದರರು ಗೋವುಗಳನ್ನು ಸಾಕಲು ಬಯಸಿದರೆ ಅವರಿಗೆ ಸಹಾಯಧನ ಸಿಗುತ್ತಿಲ್ಲ, ಆದರೆ ದಿಲ್ಲಿಯಲ್ಲಿರುವ ಸರಕಾರವು ಗೋವುಗಳನ್ನು ವಧಿಸುವವರಿಗೆ ಸಹಾಯಧನವನ್ನು ನೀಡುತ್ತಿದೆ’ ಎಂದು ಹೇಳಿದ್ದ ಮೋದಿ, ದೇಶದ ವಿವಿಧೆಡೆಗಳಲ್ಲಿ ಕಸಾಯಿಖಾನೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ ಎಂದು ಆರೋಪಿಸಿದ್ದರು.

ಮೋದಿ ಅಧಿಕಾರಕ್ಕೆ ಬಂದ ನಂತರ ಗೋ ರಕ್ಷಣೆ ಮತ್ತು ಸಸ್ಯಾಹಾರ ಬಿಜೆಪಿಯ ನೆಚ್ಚಿನ ವಿಷಯಗಳಾಗಿವೆ. ಮೋದಿ ಮತ್ತು ಅವರ ಬಾಲಬಡುಕ ಬಿಜೆಪಿ ನಾಯಕರು ಬಳಸಿದ ಕೋಮುವಾದಿ ಶಬ್ದಾಡಂಬರವು ಬೀಫ್ ಸೇವನೆ ಮತ್ತು ಅದರೊಂದಿಗೆ ನಂಟು ಹೊಂದಿದ್ದಾರೆಂದು ಊಹಿಸಲಾದವರ, ಹೆಚ್ಚಾಗಿ ಮುಸ್ಲಿಮರು ಮತ್ತು ದಲಿತರ ವಿರುದ್ಧ ಹಿಂಸಾತ್ಮಕ ಅಭಿಯಾನವನ್ನು ಹುಟ್ಟುಹಾಕಿತ್ತು. ಹ್ಯೂಮನ್ ರೈಟ್ಸ್ ವಾಚ್‌ನ ವರದಿಯಂತೆ 2015 ಮೇ ಮತ್ತು 2018 ಡಿಸೆಂಬರ್ ನಡುವಿನ ಅವಧಿಯಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ದೇಶದ 12 ರಾಜ್ಯಗಳಲ್ಲಿ ಕನಿಷ್ಠ 44 ಜನರನ್ನು ಕೊಲ್ಲಲಾಗಿತ್ತು ಮತ್ತು ಈ ಪೈಕಿ 36 ನತದೃಷ್ಟರು ಮುಸ್ಲಿಮರಾಗಿದ್ದರು. ಇದೇ ಅವಧಿಯಲ್ಲಿ 20 ರಾಜ್ಯಗಳಲ್ಲಿ ಜಾನುವಾರು ರಕ್ಷಣೆ ಜಾಗೃತಿಗೆ ಸಂಬಂಧಿಸಿದ ನೂರಕ್ಕೂ ಅಧಿಕ ವಿಭಿನ್ನ ಘಟನೆಗಳಲ್ಲಿ ಸುಮಾರು 300 ಜನರು ಗಾಯಗೊಂಡಿದ್ದರು.

ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ಹಿಂದುತ್ವ ಗುಂಪುಗಳು ಆಗಾಗ್ಗೆ ಇಂತಹ ಹಿಂಸಾಚಾರಗಳಲ್ಲಿ ತೊಡಗಿಕೊಳ್ಳುತ್ತಿದ್ದರೆ ಬಿಜೆಪಿ ನೇತೃತ್ವದ ಸರಕಾರವು ಯಾವುದೇ ರೀತಿಯಲ್ಲಿಯೂ ಮಾಂಸ ಉತ್ಪಾದನೆಗೆ ಅಡ್ಡಿಪಡಿಸದ ಆರ್ಥಿಕ ನೀತಿಯೊಂದನ್ನು ಸದ್ದಿಲ್ಲದೆ ಅನುಷ್ಠಾನಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಮಾಂಸದ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿರುವುದು ಮಾತ್ರವಲ್ಲ, 2014 ಮತ್ತು 2019ರ ನಡುವೆ ಕಸಾಯಿಖಾನೆಗಳ ಆಧುನೀಕರಣಕ್ಕಾಗಿ ಸಹಾಯಧನವನ್ನು ಸರಕಾರವು ಹೆಚ್ಚಿಸಿದೆ. ಪ್ರಮುಖ ಮಾಂಸ ರಫ್ತು ಕಂಪನಿಗಳಿಂದ ಸರಕಾರದ ನೆಚ್ಚಿನ ಯೋಜನೆಗಳಿಗೆ ಆರ್ಥಿಕ ನೆರವು ಮತ್ತು ಹಿರಿಯ ಬಿಜೆಪಿ ನಾಯಕರೊಂದಿಗೆ ಅವುಗಳ ನಿಕಟತೆ ಇವು ಸರಕಾರ ಮತ್ತು ಈ ಕಂಪನಿಗಳ ನಡುವೆ ನಿಕಟ ಸಹಕಾರವನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಆದರೆ ಇವ್ಯಾವುದೂ ಬೀಫ್ ಸೇವನೆಗೆ ಸಂಬಂಧಿಸಿದ ದ್ವೇಷ ಭಾಷಣಗಳು ಅಥವಾ ಅದು ಬೀದಿಗಳಲ್ಲಿ ಸೃಷ್ಟಿಸಿರುವ ಹಿಂಸೆಯನ್ನು ವಿರೋಧಿಸಿಲ್ಲ.

ತಥಾಕಥಿತ ಗೋರಕ್ಷಕರು ನಡೆಸುವ ಹಿಂಸಾಚಾರಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಬಿಜೆಪಿಯು ಧಾರ್ಮಿಕ ಭಾವನೆಗಳಿಗೆ ಅವಮಾನಗಳಿಂದ ಹುಟ್ಟಿಕೊಂಡ ಸಾರ್ವಜನಿಕ ಕ್ರೋಧದ ಅಭಿವ್ಯಕ್ತಿಯಾಗಿದೆ ಎಂದು ತಳ್ಳಿಹಾಕುತ್ತಿದೆ. ಆದರೆ ಈ ಭಾವನೆಗಳಿಗೂ ಬಿಜೆಪಿಯ ಇಬ್ಬಗೆ ನೀತಿಗೂ ಯಾವುದೇ ಸಂಬಂಧವಿದ್ದಂತೆ ಕಾಣುವುದಿಲ್ಲ; ಒಂದೆಡೆ ಅದು ಗೋರಕ್ಷಕರನ್ನು ಬೆಂಬಲಿಸುತ್ತದೆ ಮತ್ತು ಗೋಹತ್ಯೆಯನ್ನು ನಿಲ್ಲಿಸುವ ಹೆಸರಿನಲ್ಲಿ ಮತಗಳನ್ನು ಕೋರುತ್ತದೆ, ಇನ್ನೊಂದೆಡೆ ಮಾಂಸ, ಕೊಬ್ಬು ಇತರ ಮಾಂಸ ಉತ್ಪನ್ನಗಳಿಂದ ಹಣವನ್ನು ಮಾಡಲು ಅವುಗಳ ರಫ್ತನ್ನು ಉತ್ತೇಜಿಸುತ್ತದೆ. ಸರಕಾರದ ನೀತಿಯಲ್ಲಿ ಮತ್ತು ಗೋರಕ್ಷಕರ ದೃಷ್ಟಿಕೋನಗಳಲ್ಲಿ ಗೋ ರಕ್ಷಣೆಯು ಭಾವನಾತ್ಮಕ ವಿಷಯವಾಗಿರುವುದಕ್ಕಿಂತ ಹೆಚ್ಚಾಗಿ ಇಸ್ಲಾಮೊಫೋಬಿಯಾವನ್ನು ಹರಡಲು ಅನುಕೂಲಕರ ಸಾಧನವಾಗಿದೆ.

ತನ್ನ ಸಾರ್ವತ್ರಿಕ ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭ ಮೋದಿ ಟೀಕಿಸಿದ್ದ ಗುಲಾಬಿ ಕ್ರಾಂತಿಯು ಅವರ ಅಧಿಕಾರಾವಧಿಯಲ್ಲಿ ಇನ್ನಷ್ಟು ಉಚ್ಚ್ರಾಯಕ್ಕೇರಿದೆ. ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ವು 2020, ಜನವರಿಯಲ್ಲಿ ಬಿಡುಗಡೆಗೊಳಿಸಿದ್ದ 'ದಿ ಇಂಡಿಯನ್ ಮೀಟ್ ಇಂಡಸ್ಟ್ರಿ ರೆಡ್ ಮೀಟ್ ಮ್ಯಾನ್ಯುಯಲ್‌'ನಲ್ಲಿ ಹೇಳಿರುವಂತೆ ಎಮ್ಮೆಯ ಮಾಂಸದ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. 2018-19ರಲ್ಲಿ ಭಾರತವು 3.61 ಶತಕೋಟಿ ಡಾ. ಮೌಲ್ಯದ 12.40 ಲ.ಟನ್ ಎಮ್ಮೆ ಮಾಂಸದ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಭಾರತದಿಂದ ರಫ್ತಾಗುವ ಒಟ್ಟು ಪ್ರಾಣಿ ಉತ್ಪನ್ನಗಳಲ್ಲಿ ಎಮ್ಮೆ ಮಾಂಸದ ಪಾಲು ಶೇ.89.08ಕ್ಕೂ ಹೆಚ್ಚಿದೆ ಎಂದು ಎಪಿಇಡಿಎ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಭಾರತದ ಎಮ್ಮೆ ಮಾಂಸ ರಫ್ತಿಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮಲೇಷಿಯಾ, ಈಜಿಪ್ಟ್, ವಿಯೆಟ್ನಾಂ ಮತ್ತು ಸೌದಿ ಅರೇಬಿಯಾ ಸೇರಿವೆ. ಕಳೆದ ಒಂದು ದಶಕದಲ್ಲಿ ಭಾರತವು ವಿಶ್ವದಲ್ಲಿ ಅಗ್ರಗಣ್ಯ ಎಮ್ಮೆ ಮಾಂಸ ರಫ್ತು ದೇಶವೆಂಬ ಹೆಗ್ಗಳಿಕೆಯನ್ನು ನಿರಂತರವಾಗಿ ಕಾಯ್ದುಕೊಂಡಿದೆ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಈ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ರಾಣಿ ಉತ್ಪನ್ನಗಳು ಭಾರತದ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಎಪಿಇಡಿಎ ಮ್ಯಾನ್ಯುಯಲ್ ಹೇಳುತ್ತದೆ. ಮಾಂಸ ಮತ್ತು ಪ್ರಾಣಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲವಾದರೂ ಬಿಜೆಪಿಯ ಬೂಟಾಟಿಕೆಯು ಕಣ್ಣಿಗೆ ಢಾಳಾಗಿ ಎದ್ದು ಕಾಣುತ್ತಿದೆ. ಬಿಜೆಪಿ ಮತ್ತು ಅದರ ಮಾತೃಸಂಸ್ಥೆ ಆರೆಸ್ಸೆಸ್ ಸುದೀರ್ಘ ಕಾಲದಿಂದ ಮೇಲ್ಜಾತಿಗಳ ಧಾರ್ಮಿಕ ಸಸ್ಯಾಹಾರವಾದವನ್ನು ಪ್ರೋತ್ಸಾಹಿಸಿಕೊಂಡೇ ಬಂದಿವೆಯಾದರೂ ಅದು ಬಿಜೆಪಿ ಆಡಳಿತದಡಿ ಮಾಂಸ ಉತ್ಪಾದನೆ ಮತ್ತು ಸೇವನೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ಸದ್ಯ ದೇಶದಲ್ಲಿ 3,600 ಕಸಾಯಿಖಾನೆಗಳಿವೆ. ಡಾಟಾ-ಜರ್ನಲಿಸಂ ವೆಬ್‌ಸೈಟ್ ಇಂಡಿಯಾಸ್ಪೆಂಡ್ ತಿಳಿಸಿರುವಂತೆ ಭಾರತದ ಅತ್ಯಂತ ದೊಡ್ಡ ಎಮ್ಮೆಮಾಂಸ ರಫ್ತು ಕಂಪನಿಗಳು ಮತ್ತು ಕಸಾಯಿಖಾನೆಗಳು 2012 ಮತ್ತು 2018ರ ನಡುವೆ ಜಾನುವಾರು ಹತ್ಯೆಗಳಿಗೆ ಸಂಬಂಧಿಸಿದಂತೆ ಅತ್ಯಧಿಕ ಸಂಖ್ಯೆಯಲ್ಲಿ ದ್ವೇಷಾಪರಾಧಗಳು ವರದಿಯಾಗಿರುವ ಉತ್ತರ ಪ್ರದೇಶದಲ್ಲಿಯೇ ಇವೆ. ದೇಶದಲ್ಲಿಯ 24 ಮಾಂಸ ಸಂಸ್ಕರಣೆ ಘಟಕಗಳ ಪೈಕಿ 13 ಮುಖ್ಯವಾಗಿ ಮಾಂಸ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತಿನಲ್ಲಿ ತೊಡಗಿಕೊಂಡಿವೆ. ಎಪಿಇಡಿಎ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಕಳೆದ ಒಂದು ವರ್ಷದಲ್ಲಿ ಎಮ್ಮೆಮಾಂಸ ಸಂಸ್ಕರಣೆಯ ಮೂರು ನೂತನ ರಫ್ತು ನಿರ್ದೇಶಿತ ಘಟಕಗಳಿಗೆ ಅನುಮತಿ ನೀಡಲಾಗಿದ್ದು, ಅವು ಅನುಷ್ಠಾನದ ಹಂತದಲ್ಲಿವೆ.

ಮಾಂಸ ರಫ್ತುಗಳು ಮೋದಿ ಸರಕಾರದ ಪಾಲಿಗೆ ನಿರ್ಣಾಯಕ ಹೂಡಿಕೆಯಾಗಿವೆ ಎನ್ನುವುದು ಸ್ವಷ್ಟವಾಗಿದೆ. ಆಹಾರ ಸಂಸ್ಕರಣೆ ಉದ್ಯಮಗಳ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯೊಂದಕ್ಕೆ ನೀಡಿದ ಉತ್ತರದಲ್ಲಿ ಒದಗಿಸಿರುವ ದತ್ತಾಂಶಗಳು 2014 ಮತ್ತು 2019ರ ನಡುವೆ ಕಸಾಯಿಖಾನೆಗಳ ಸ್ಥಾಪನೆ ಮತ್ತು ಆಧುನೀಕರಣಕ್ಕಾಗಿ 120.925 ಕೋ.ರೂ.ಗಳ ಸಹಾಯಧನವನ್ನು ಬಿಡುಗಡೆಗೊಳಿಸಿದೆ ಎನ್ನುವುದನ್ನು ಬಹಿರಂಗಗೊಳಿಸಿವೆ. ಯುಪಿಎ-2 ಸರಕಾರವು ತನ್ನ ಅಧಿಕಾರಾವಧಿಯಲ್ಲಿ ಒದಗಿಸಿದ್ದ ಸಹಾಯಧನಕ್ಕೆ ಹೋಲಿಸಿದರೆ ಇದು ಗಣನೀಯ ಹೆಚ್ಚಳವಾಗಿದೆ.

ಗೋರಕ್ಷಣೆಯ ಬಗ್ಗೆ ಭಾರೀ ಪ್ರತಿಪಾದಿಸುವ ಸರಕಾರದ ಮೂಗಿನಡಿಯೇ ಮಾಂಸ ರಫ್ತು ಉದ್ಯಮ ಹುಲುಸಾಗಿ ಬೆಳೆಯುತ್ತಿರುವುದು ಸಹಜವಾಗಿಯೇ ಹಲವರ ಗಮನವನ್ನು ಸೆಳೆದಿದೆ. ‘ನಮ್ಮ ದೇಶವು ಗೋಮಾಂಸ ಮತ್ತು ಬೀಫ್ ಅನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದರೆ ಅವರು (ಬಿಜೆಪಿ) ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಗೋಹತ್ಯೆಯನ್ನು ನಿಷೇಧಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ’ ಎಂದು 2018ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಯವರು ಉಲ್ಲೇಖಿಸಿದ್ದರು. ಭಾರತೀಯ ಕಾನೂನು ಗೋಮಾಂಸ ರಫ್ತಿಗೆ ಅವಕಾಶ ನೀಡುವುದಿಲ್ಲ. ಆದರೆ ಎವ್ಮೆುಮಾಂಸ ಮತ್ತು ಅದರ ಉಪ ಉತ್ಪನ್ನಗಳ ರಫ್ತಿಗೆ ಅನುಮತಿಯಿದೆ ಮತ್ತು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯದಿಂದ ಪರವಾನಿಗೆ ಪಡೆದುಕೊಂಡು ಅವುಗಳನ್ನು ಆಮದು ಸಹ ಮಾಡಿಕೊಳ್ಳಬಹುದು. ಈ ವರ್ಷದ ಫೆಬ್ರವರಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರಕಾರವು ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆಯನ್ನು ಅಂಗೀಕರಿಸಿದ್ದು, ಇದು 13 ವರ್ಷ ಪ್ರಾಯದೊಳಗಿನ ಎಮ್ಮೆಗಳು ಸೇರಿದಂತೆ ಎಲ್ಲ ಜಾನುವಾರುಗಳ ಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಕರ್ನಾಟಕದಲ್ಲಿಯ ನಿಷೇಧವು ಬೀಫ್ ಅನ್ನು ವ್ಯಾಪಕವಾಗಿ ಸೇವಿಸುವ, ಬಿಜೆಪಿಯದ್ದೇ ಆಡಳಿತವಿರುವ ನೆರೆಯ ಗೋವಾ ರಾಜ್ಯದಲ್ಲಿ ಬೀಫ್ ಪೂರೈಕೆಗೆ ವ್ಯತ್ಯಯವನ್ನುಂಟು ಮಾಡಿದೆ. ಅದೀಗ ಬೀಫ್ ಪೂರೈಕೆಗಾಗಿ ಇತರ ರಾಜ್ಯಗಳತ್ತ ಮುಖ ಮಾಡಿದೆ. ’ನಾನೂ ಗೋಮಾತೆಯನ್ನು ಆರಾಧಿಸುತ್ತೇನೆ. ಆದರೆ ನಮ್ಮ ರಾಜ್ಯದಲ್ಲಿ ಶೇ.30ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರ ಬಗ್ಗೆಯೂ ಕಾಳಜಿ ವಹಿಸುವುದು ನನ್ನ ಕರ್ತವ್ಯವಾಗಿದೆ’ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರಗೊಂಡ ಬೆನ್ನಿಗೇ ಹೇಳಿದ್ದರು. ರಾಷ್ಟ್ರೀಯ ನಾಯಕತ್ವದ ರಾಜಕೀಯ ನಿಲುವುಗಳು ಹೆಚ್ಚಿನ ಮಾಂಸಾಹಾರಿಗಳಿರುವ, ತಮ್ಮದೇ ಆದ ರಾಜಕೀಯ ಆದ್ಯತೆಗಳನ್ನು ಹೊಂದಿರುವ ರಾಜ್ಯಗಳಲ್ಲಿಯ ನೀತಿಯ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ ಎನ್ನುವುದು ಸ್ಪಷ್ಟವಿದೆ.

ಮೋದಿ ಸರಕಾರವು ಎವ್ಮೆುಯ ಕೊಬ್ಬಿನ ರಫ್ತನ್ನು ಶಾಸನಬದ್ಧಗೊಳಿಸಿದ ಹೆಗ್ಗಳಿಕೆಯನ್ನೂ ಹೊಂದಿದೆ ಮತ್ತು ಅದು ಈಗ ಹುಲುಸಾದ ಉದ್ಯಮವಾಗಿ ಬೆಳೆಯಲು ಸುಗಮ ಮಾರ್ಗವನ್ನು ಕಲ್ಪಿಸಿದೆ. 1983ರಲ್ಲಿ ವನಸ್ಪತಿ ತುಪ್ಪ (ಸಸ್ಯಜನ್ಯ ಕೊಬ್ಬು)ದ ಕೆಲವು ಸ್ಯಾಂಪಲ್‌ಗಳಲ್ಲಿ ಅಗ್ಗದ ಆಮದಿತ ಎಮ್ಮೆಕೊಬ್ಬು ಪತ್ತೆಯಾಗಿ ವಿವಾದ ಸೃಷ್ಟಿಯಾದಾಗ ಮೊದಲ ಬಾರಿಗೆ ಪ್ರಾಣಿಜನ್ಯ ಕೊಬ್ಬಯ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಮರುವರ್ಷವೇ ಚುನಾವಣೆ ನಡೆಯಲಿದ್ದರಿಂದ ಬಿಜೆಪಿ ಮತ್ತು ಜನತಾ ಪಾರ್ಟಿಯ ಬಣಗಳನ್ನು ಒಳಗೊಂಡಿದ್ದ ಪ್ರತಿಪಕ್ಷವು ಖಾದ್ಯತೈಲ ಉದ್ಯಮವನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್‌ನ ‘ನಿರ್ಲಕ್ಷ್ಯ’ವನ್ನು ಪ್ರಚಾರ ವಿಷಯವನ್ನಾಗಿಸಲು ನಿರ್ಧರಿಸಿದ್ದವು. ಚಳಿಗಾಲದ ಅಧಿವೇಶನದುದ್ದಕ್ಕೂ ಇದು ಸಂಸತ್ತಿನಲ್ಲಿ ಆಗಾಗ್ಗೆ ಚರ್ಚೆಯ ವಿಷಯವಾಗಿತ್ತು ಮತ್ತು ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಧರಣಿ ನಡೆದಿತ್ತು.

ಇಂದಿರಾ ಗಾಂಧಿ ಸರಕಾರವು ಕಾರ್ಯಾಚರಣೆಗೆ ಇಳಿದಿತ್ತು. ಹಲವು ವನಸ್ಪತಿ ತಯಾರಿಕೆ ಘಟಕಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು ಮತ್ತು ಕೆಲವು ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪತ್ತೆಯಾಗಿತ್ತು. ವನಸ್ಪತಿ ಕಲಬೆರಕೆಯ 11 ಪ್ರಕರಣಗಳ ತನಿಖೆ ನಡೆಸಿದ ಸಿಬಿಐ ಅವುಗಳ ಪೈಕಿ ಎಂಟರಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಇಬ್ಬರನ್ನು ಬಂಧಿಸಿತ್ತು. ಜೈನ್ ಶುದ್ಧ ವನಸ್ಪತಿಯ ಆಡಳಿತ ನಿರ್ದೇಶಕ ವಿನೋದಕುಮಾರ ಜೈನ್ ಬಂಧಿತರಲ್ಲೋರ್ವರಾಗಿದ್ದು, ಪ್ರಾಣಿ ಕೊಬ್ಬನ್ನು ಅಕ್ರಮವಾಗಿ ಆಮದು ಮಾಡಿಕೊಂಡಿದ್ದ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ 29 ದಿನಗಳನ್ನು ಕಳೆದಿದ್ದರು. 2014ರಲ್ಲಿ ಸಿಬಿಐ ನ್ಯಾಯಾಲಯವು ಭಠಿಂಡಾ ಕೆಮಿಕಲ್ಸ್‌ನ ಅಧ್ಯಕ್ಷ ರಾಜಿಂದರ್ ಮಿತ್ತಲ್ ಮತ್ತು ಇತರ ಮೂವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವುದರೊಂದಿಗೆ ಕೊನೆಗೂ ಪ್ರಕರಣವು ಮುಕ್ತಾಯಗೊಂಡಿತ್ತು. ವಂಚನೆ, ಒಳಸಂಚು ಮತ್ತು ಸಾಕ್ಷ್ಯನಾಶದ ಆರೋಪಗಳಲ್ಲಿ ಅವರನ್ನು ತಪಿತಸ್ಥರೆಂದು ನ್ಯಾಯಾಲಯವು ಘೋಷಿಸಿತ್ತು. ಅಂದ ಹಾಗೆ ಪಂಜಾಬಿನ ಬಿಜೆಪಿ ನಾಯಕ ಹಿತ್ ಅಭಿಲಾಷಿ ಅವರು ಭಠಿಂಡಾ ಕೆಮಿಕಲ್ಸ್‌ನ ಶಿಲಾನ್ಯಾಸವನ್ನು ನೆರವೇರಿಸಿದ್ದರು.

ಇಂದಿರಾ ಗಾಂಧಿ ಸರಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದ ವಿಶ್ವನಾಥ ಪ್ರತಾಪ ಸಿಂಗ್ ಅವರು 1983 ಅಕ್ಟೋಬರ್ 1ರಂದು ಪ್ರಾಣಿಜನ್ಯ ಕೊಬ್ಬಿನ ಆಮದಿನ ಮೇಲೆ ಸಾರಾಸಗಟು ನಿಷೇಧವನ್ನು ಘೋಷಿಸಿದ್ದರು. ಜನರ ಭಾವನೆಗಳನ್ನು ಗೌರವಿಸಿ ನಿಷೇಧದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ನ.15ರಂದು ಸಂಸತ್ತಿನಲ್ಲಿ ತಿಳಿಸಿದ್ದರು.

ಆದರೆ ಆಗಿನಿಂದ ಕೆಲವು ರಾಜ್ಯಗಳು ಗೋಹತ್ಯೆಯನ್ನು ನಿಷೇಧಿಸಿದ್ದರೂ ಕೇಂದ್ರವನ್ನಾಳಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ವಿವಿಧ ಸರಕಾರಗಳು ರಾಷ್ಟ್ರವ್ಯಾಪಿ ಇಂತಹ ನಿಷೇಧವನ್ನು ಹೇರಿರಲಿಲ್ಲ. 2017ರಲ್ಲಿ ಪರಿಸರ ಸಚಿವಾಲಯವು ಎಮ್ಮೆಗಳು ಸೇರಿದಂತೆ ಎಲ್ಲ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತಾದರೂ ಹಲವಾರು ರಾಜ್ಯಗಳಿಂದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅದನ್ನು ಶೀಘ್ರವೇ ಹಿಂದೆಗೆದುಕೊಳ್ಳಲಾಗಿತ್ತು. ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಭಾರತವು ಮಾಂಸ ಮತ್ತು ಮಾಂಸ ಉತ್ಪನ್ನಗಳ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅಂದರೆ ಮಾಂಸ ಉತ್ಪಾದನೆಯ ಉಪ ಉತ್ಪನ್ನವಾಗಿ ಪ್ರಾಣಿಜನ್ಯ ಕೊಬ್ಬು ದೇಶದಲ್ಲಿಯೇ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿತ್ತು ಮತ್ತು ಅದನ್ನು ಆಮದು ಮಾಡಿಕೊಳ್ಳುವ ಅಗತ್ಯವಿರಲಿಲ್ಲ. 2014ರಲ್ಲಿ ಮೋದಿ ಸರಕಾರವು ಅನುಮತಿ ಪಡೆದ ಮಾಂಸ ರಫ್ತು ಕಂಪನಿಗಳಿಂದ ಎಮ್ಮೆಕೊಬ್ಬಿನ ರಫ್ತಿಗೆ ಅವಕಾಶ ಕಲ್ಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದು 1983ರ ಬಳಿಕ ಎಮ್ಮೆಕೊಬ್ಬಿನ ಅಂತರರಾಷ್ಟ್ರಿಯ ವ್ಯಾಪಾರಕ್ಕೆ ಸಂಬಂಧಿದಂತೆ ಮೊದಲ ಸರಕಾರಿ ನಿರ್ಧಾರವಾಗಿತ್ತು. ಆದರೆ ಕೊಬ್ಬಿನ ಆಮದಿನ ಮೇಲಿನ ನಿಷೇಧ ಮುಂದುವರಿದಿದೆ.

ಎಪಿಇಡಿಎ ಮ್ಯಾನ್ಯುವಲ್ ಕೊಬ್ಬನ್ನು ‘ಕೋಳಿಗಳ ಬೆಳವಣಿಗೆಗೆ ಅಗತ್ಯವಾದ ಎಲ್ಲ ಫ್ಯಾಟಿ ಆ್ಯಸಿಡ್‌ಗಳನ್ನು ಒಳಗೊಂಡಿರುವ ಶಕ್ತಿಯ ಸಮೃದ್ಧ ಮೂಲವಾಗಿದೆ. ಆದರೆ ಅದನ್ನು ಹೆಚ್ಚಾಗಿ ಖಾದ್ಯೇತರ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ’ ಎಂದು ಬಣ್ಣಿಸಿದೆ. ವಾಣಿಜ್ಯ ಸಚಿವಾಲಯವು ಸಂಕಲಿಸಿರುವ ದಾಖಲೆಗಳಂತೆ ಭಾರತವು 2019ರಲ್ಲಿ 102 ಕೋ.ರೂ.ಗೂ ಅಧಿಕ ಮೌಲ್ಯದ ‘ಇತರ ಕೊಬ್ಬನ್ನು’ ರಫ್ತು ಮಾಡಿತ್ತು. ಇದು 2020 ಎಪ್ರಿಲ್ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 117 ಕೋ.ರೂ.ಗೆ ಏರಿಕೆಯಾಗಿತ್ತು. ಈ ದತ್ತಾಂಶವು ಎಮ್ಮೆಕೊಬ್ಬನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲವಾದರೂ ಅದರ ಇಂಡಿಯನ್ ಟ್ರೇಡ್ ಕ್ಲಾಸಿಫಿಕೇಷನ್ ಕೋಡ್ 2014ರ ಅಧಿಸೂಚನೆಯಲ್ಲಿ ಒದಗಿಸಿದ್ದ ಕೋಡ್‌ಗೆ ತಾಳೆಯಾಗುತ್ತಿತ್ತು ಮತ್ತು ಈ ಕೋಡ್ ಎಮ್ಮೆಕೊಬ್ಬನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿದೆ.

2016ರಲ್ಲಿ ಗುರ್ಗಾಂವ್ ಗೋರಕ್ಷಾ ದಳ ಎಂಬ ಗೋರಕ್ಷಕರ ಗುಂಪೊಂದು ಬೀಫ್ ಕಳ್ಳಸಾಗಾಣಿಕೆಯ ಆರೋಪದಲ್ಲಿ ಇಬ್ಬರು ಮುಸ್ಲಿಮ್ ವ್ಯಕ್ತಿಗಳನ್ನು ಬಲಾತ್ಕಾರದಿಂದ ಸೆಗಣಿ ಮತ್ತು ಗೋಮೂತ್ರವನ್ನು ಸೇವಿಸುವಂತೆ ಮಾಡಿತ್ತು. ಆಕಳ ಅಥವಾ ಎಮ್ಮೆಯ ಕೊಬ್ಬಿನ ರಫ್ತಿಗೆ ಅನುಮತಿ ನೀಡಿದ್ದ ಮೋದಿ ಸರಕರದ 2014ರ ನಿರ್ಧಾರದ ಬಗ್ಗೆ ನಿಮಗೆ ಗೊತ್ತಿದೆಯೇ ಎಂದು ನಾನು ಈ ಗುಂಪಿನ ಸದಸ್ಯ ಧರ್ಮೇಂದ್ರ ಯಾದವ ಎಂಬಾತನನ್ನು ಪ್ರಶ್ನಿಸಿದ್ದೆ. ತನಗೆ ಗೊತ್ತಿಲ್ಲ ಮತ್ತು ಆಕಳ ಅಥವಾ ಎಮ್ಮೆಯ ಕೊಬ್ಬನ್ನು ರಫ್ತಿಗೆ ಅವಕಾಶ ಕಲ್ಪಿಸುವ ಸರಕಾರದ ನೀತಿಯನ್ನು ತಾನು ಒಪ್ಪಿಕೊಳ್ಳವುದಿಲ್ಲ. ಸರಕಾರವು ಇದನ್ನು ಆರಂಭಿಸಿದ್ದರೆ ಅದು ಸಂಪೂರ್ಣ ತಪ್ಪು ಎಂದು ಹೇಳಿದ್ದ. ಆದರೆ, ಆಕಳುಗಳ ಹತ್ಯೆಗಳು ಕಡಿಮೆಯಾಗುವಂತಾಗಲು ಅವರು ಎಮ್ಮೆಯ ಕೊಬ್ಬನ್ನು ಮಾತ್ರ ರಫ್ತು ಮಾಡುತ್ತಿರಬಹುದು ಎಂದು ಆತ ಸಮಜಾಯಿಷಿ ನೀಡಿದ್ದ.

ಎಪಿಇಡಿಎ ವೆಬ್‌ಸೈಟ್‌ನಲ್ಲಿರುವ ಎಮ್ಮೆಮಾಂಸ ರಫ್ತುದಾರರ ಪಟ್ಟಿಯು ಮೋದಿ ಸರಕಾರ ಮತ್ತು ಬಿಜೆಪಿಗೆ ನಿಕಟವಾಗಿರುವ ಕಂಪನಿಗಳ ಹೆಸರುಗಳನ್ನು ತೋರಿಸುತ್ತಿದೆ. ದೇಶದ ಅತ್ಯಂತ ದೊಡ್ಡ ಎಮ್ಮೆಮಾಂಸ ರಫ್ತು ಸಂಸ್ಥೆಯಾಗಿರುವ ಅಲಾನಸನ್ಸ್ ಪ್ರೈ.ಲಿ.ಉತ್ತರ ಪ್ರದೇಶದಲ್ಲಿಯ ಮೋದಿಯವರ ದತ್ತುಗ್ರಾಮ ಜಯಪುರದಲ್ಲಿಯ ಮೂಲಸೌಕರ್ಯ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಿದ್ದಕ್ಕಾಗಿ ಈ ಹಿಂದೆ ಸುದ್ದಿಯಲ್ಲಿತ್ತು. ಮುಷಹರ ದಲಿತ ಸಮುದಾಯದವರಿಗಾಗಿ ಅಲಾನಾಸನ್ಸ್ ‘ಮೋದಿಜಿ ಕಾ ಅಟಲ್ ನಗರ್’ ಹೆಸರಿನ 14 ಫ್ಲಾಟ್‌ಗಳ ಹೌಸಿಂಗ್ ಕಾಲನಿಯನ್ನು ನಿರ್ಮಿಸಿದ್ದನ್ನು ದಿ ಕಾರವಾನ್ 2017 ಜನವರಿಯಲ್ಲಿ ವರದಿಮಾಡಿತ್ತು.

ಸರಕಾರದಿಂದ ಅನುಮತಿ ಪಡೆದಿರುವ ಅಗ್ರಗಣ್ಯ 10 ಎಮ್ಮೆಮಾಂಸ ರಫ್ತು ಕಂಪನಿಗಳಲ್ಲಿ ಸೇರಿರುವ ಫೇರ್ ಎಕ್ಸ್‌ಪೋರ್ಟ್ಸ್ ಇಂಡಿಯಾ ಪ್ರೈ.ಲಿ ಮತ್ತು ಅಮ್ರೂನ್ ಫುಡ್ಸ್ ಪ್ರೈ.ಲಿ. ಯುಎಇಯಲ್ಲಿ ನೆಲೆಗೊಂಡಿರುವ ಕೇರಳ ಮೂಲದ ಉದ್ಯಮಿ ಎಂ.ಎ.ಯೂಸುಫ್ ಅಲಿ ಅವರು ಸ್ಥಾಪಿಸಿರುವ ಲುಲು ಗ್ರೂಪ್ ಇಂಟರ್‌ನ್ಯಾಷನಲ್‌ನ ಅಂಗಸಂಸ್ಥೆಗಳಾಗಿವೆ. 2019ರಲ್ಲಿ ಮೋದಿಯವರು ಅಲಿ ಅವರ ಉಪಸ್ಥಿತಿಯಲ್ಲಿ ಯುಎಇಯ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಝಾಯೆದ್’ ಅನ್ನು ಸ್ವೀಕರಿಸಿದ್ದರು. ಡಿಸೆಂಬರ್ 2020ರಲ್ಲಿ ಲುಲು ಗ್ರೂಪ್ ತಾನು 60 ಕೋ.ರೂ.ಗಳ ಪ್ರಾರಂಭಿಕ ವೆಚ್ಚದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆಹಾರ ಸಂಸ್ಕರಣೆ ಘಟಕವೊಂದನ್ನು ಸ್ಥಾಪಿಸುವುದಾಗಿ ಪ್ರಕಟಿಸಿತ್ತು. ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಬೃಹತ್ ಮಾಲ್‌ವೊಂದನ್ನು ಸ್ಥಾಪಿಸುವ ಯೋಜನೆಯನ್ನೂ ಅದು ಹೊಂದಿದೆ. 2019ರಲ್ಲಿ 'ದಿ ಕಾರವಾನ್' ವರದಿ ಮಾಡಿದ್ದಂತೆ ಲುಲು ಗ್ರೂಪ್‌ನ ಪ್ರಾದೇಶಿಕ ನಿರ್ದೇಶಕ ಮುಹಮ್ಮದ್ ಅಲ್ತಾಫ್ ಮುಸ್ಲಿಯಂ ವೀಟಿಲ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜ�

Writer - ಆದಿರಾ ಕೊನಿಕ್ಕರ್ - caravanmagazine.in

contributor

Editor - ಆದಿರಾ ಕೊನಿಕ್ಕರ್ - caravanmagazine.in

contributor

Similar News