ಜೂ.21: ಯೋಗ ದಿನದ ಅಂಗವಾಗಿ 'ಯೋಗ ಮಾಡೋಣ ಕೊರೋನ ಗೆಲ್ಲೋಣ' ಕಾರ್ಯಕ್ರಮ

Update: 2021-06-20 17:28 GMT

ಬೆಂಗಳೂರು, ಜೂ. 20: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಾಳೆ(ಜೂ.21) ಹಲವು ವಿಶೇಷ ಕಾರ್ಯಕ್ರಮಗಳನ್ನು ಆನ್‍ಲೈನ್ ಸಂವಾದ ಮೂಲಕ ಆಯೋಜಿಸಲಾಗಿದೆ.

ಕೇಂದ್ರ ಸರಕಾರದ ಆಯುಷ್ ಇಲಾಖೆ ಸಹಯೋಗದೊಂದಿಗೆ ಇಂದು ಸಾಮಾನ್ಯ ಶಿಷ್ಟಾಚಾರ ಪದ್ಧತಿಯ ಯೋಗಕ್ರಮಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ಜೊತೆಗೆ ಅದರಿಂದಾಗುವ ಪ್ರಯೋಜನಗಳನ್ನು ವಿವರಿಸಲಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸೂಕ್ತವಾದ 'ಯೋಗ ಮಾಡೋಣ ಕೊರೋನ ಗೆಲ್ಲೋಣ' ಎಂಬ ಘೋಷವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅದೇ ರೀತಿ, ಯೋಗ ಫಾರ್ ಕೋವಿಡ್ ಎಂಬ ವಿಶೇಷ ಯೋಗ ಭಂಗಿಗಳನ್ನು, ಪ್ರಾಣಾಯಾಮ, ಧ್ಯಾನ ಕ್ರಮಗಳನ್ನು ನುರಿತ ಯೋಗ ಶಿಕ್ಷಕರು ಕಲಿಸಿಕೊಡಲಿದ್ದಾರೆ.

ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಅನೇಕ ನುರಿತ ಯೋಗ ಪಟುಗಳ ಯೋಗ ಪ್ರದರ್ಶನ, ನೃತ್ಯಯೋಗ, ಮಕ್ಕಳಿಗಾಗಿ ಯೋಗ ಹೀಗೆ ಉತ್ತಮ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಇದನ್ನು `ಯೋಗ ಗಂಗೋತ್ರಿ'ಯ ಫೇಸ್‍ಬುಕ್ ಪುಟದಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 88846 46108,  843149 9898, 98456 45230ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News