ಎಂ. ಚೆನ್ನಪ್ಪ
Update: 2021-06-24 22:27 IST
ಮಂಗಳೂರು, ಜೂ. 24: ಮಂಜೇಶ್ವರ ಅಂಬೇಡ್ಕರ್ ನಗರ ಉದ್ಯಾವರಗುತ್ತು ನಿಸರ್ಗ ನಿವಾಸಿ ಎಂ.ಚೆನ್ನಪ್ಪ (83) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಹಿರಿಯ ಪತ್ರಕರ್ತ ಪ್ರಕಾಶ್ ಮಂಜೇಶ್ವರ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಸಿಪಿಸಿಆರ್‌ಐ ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಸೈನ್ಯದಲ್ಲೂ ಕರ್ತವ್ಯ ನಿರ್ವಹಿಸಿದ್ದರು.