×
Ad

ರೇಖಾ ಹತ್ಯೆ ಪ್ರಕರಣ: ಕದಿರೇಶ್ ಸಹೋದರಿ ಮಾಲಾ ಸೇರಿ ಇಬ್ಬರ ಬಂಧನ

Update: 2021-06-27 22:49 IST

ಬೆಂಗಳೂರು, ಜೂ.27: ಛಲವಾದಿಪಾಳ್ಯ ವಾರ್ಡ್‍ನ ಪಾಲಿಕೆಯ ಮಾಜಿ ಸದಸ್ಯೆ ಬಿಜೆಪಿಯ ಆರ್.ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಖದಿರೇಶ್ ಅವರ ಅಕ್ಕ ಮಾಲಾ ಮತ್ತು ಪುತ್ರ ಅರುಳ್ ಅವರನ್ನು ಕಾಟನ್‍ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರಿಂದ, ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. 

ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನದಡಿ ಕದಿರೇಶ್ ಅವರ ಅಕ್ಕ ಮಾಲಾ, ಆಕೆಯ ಮಗ ಅರುಳ್ ಅವರನ್ನು ಕಳೆದ 3 ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಕೊಲೆ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದ ಕಾರಣ ಬಂಧಿಸಿದ್ದಾರೆ. 

ವಾರ್ಡ್‍ನಲ್ಲಿ ಹಿಡಿತ ಸಾಧಿಸಲು ಕದಿರೇಶ್ ಕುಟುಂಬಸ್ಥರೇ ರೇಖಾ ಹತ್ಯೆ ಮಾಡಿಸಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News