×
Ad

ಅನಂತ ಪದ್ಮನಾಭ ಹೆಗ್ಡೆ

Update: 2021-06-28 23:58 IST

ಕೊಣಾಜೆ: ಹರೇಕಳ ಡೆಬ್ಬೇಲಿ ನಿವಾಸಿ ಅನಂತ ಪದ್ಮನಾಭ ಹೆಗ್ಡೆ (92)  ಸೋಮವಾರ ನಿಧನ ಹೊಂದಿದರು.
ಮೃತರು ಹರೇಕಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹಾಬಲ ಹೆಗ್ಡೆ ಸೇರಿದಂತೆ ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಉದ್ಯಮಿಯಾಗಿ, ಬೀಡಿ ಗುತ್ತಿಗೆದಾರರಾಗಿ ಗ್ರಾಮೀಣ ಪ್ರದೇಶದಲ್ಲಿ ಹಲವರಿಗೆ ಉದ್ಯೋಗ ಕಲ್ಪಿಸಿದ್ದ ಅವರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. 

ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ  ಕೊಡುಗೈದಾನಿಯಾಗಿದ್ದ ಅವರು ಶೈಕ್ಷಣಿಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು. ಸುಮಾರು 30 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು.

ಶಾಸಕ ಯು.ಟಿ.ಖಾದರ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಮುಹಮ್ಮದ್ ಮುಸ್ತಾಫ ಹರೇಕಳ, ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷ ಬದ್ರುದ್ದೀನ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News