ವಶಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ವಂಚನೆ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಕೋರ್ಟ್
Update: 2021-06-30 23:55 IST
ಬೆಂಗಳೂರು, ಜೂ.30: ಹನುಮಂತನಗರದಲ್ಲಿರುವ ವಶಿಷ್ಠ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ವೆಂಕಟನಾರಾಯಣ ಮತ್ತು ಪುತ್ರ ಕೃಷ್ಣಪ್ರಸಾದ್‍ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಗರದ ಸಿಟಿ ಸಿವಿಲ್ ಕೋರ್ಟ್ ನಿರಾಕರಿಸಿದೆ.
ಗ್ರಾಹಕರು ಮೆಚ್ಚುರಿಟಿ ಮತ್ತು ಬಡ್ಡಿ ಹಣವನ್ನು ಕೇಳಿದಾಗ ಲಾಕ್‍ಡೌನ್‍ನಿಂದಾಗಿ ಸಾಲದ ಹಣ ಬರುತ್ತಿಲ್ಲ ಎಂದು ಬ್ಯಾಂಕ್ ಮುಖ್ಯಸ್ಥರಾದ ವೆಂಕಟನಾರಾಯಣ ಹಾಗೂ ಕೃಷ್ಣ ಪ್ರಸಾದ್ ಅವರು ಸುಳ್ಳು ಹೇಳುತ್ತಿದ್ದರು. ಹೀಗಾಗಿ, ಇವರಿಬ್ಬರ ವಿರುದ್ಧ ಗ್ರಾಹಕರು ವಂಚನೆ ಆರೋಪ ಮಾಡಿದ್ದರು.
ಬಳಿಕ ವೆಂಕಟನಾರಾಯಣ ಹಾಗೂ ಕೃಷ್ಣ ಪ್ರಸಾದ್ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವೆಂಕಟನಾರಾಯಣ ಹಾಗೂ ಕೃಷ್ಣ ಪ್ರಸಾದ್ ಪರಾರಿಯಾಗಿದ್ದರು.