ಕಪ್ಪೆಟ್ಟು ವ್ಯಾಸರಾಯ ಭಟ್
Update: 2021-07-01 19:39 IST
ಉಡುಪಿ, ಜು.1: ಕಪ್ಪೆಟ್ಟು ವ್ಯಾಸರಾಯ ಭಟ್ (73) ಗುರುವಾರ ಅಲೆವೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಯನ್ನು ಹೊಂದಿದ್ದ ಇವರು ಉಡುಪಿ ರಂಗಭೂಮಿ ಸಂಸ್ಥೆಯಲ್ಲಿ ಧ್ವನಿ ಬೆಳಕು ತಜ್ಞರಾಗಿ ಹಾಗೂ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯಲ್ಲಿ ವೇಷಭೂಷಣಗಳ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಎರಡೂ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರಸಿದ್ದು, ಶ್ರೀಕೃಷ್ಣ ಮಠದಲ್ಲಿ ಪರಿಚಾರಕರಾಗಿ ಸೇವೆ ಸಲ್ಲಿಸಿದ ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.