ದೃಷ್ಟಿ ವಿಕಲಚೇತನ ಮಕ್ಕಳ ವಸತಿಯುತ ಶಾಲೆಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2021-07-02 16:51 GMT

ಬೆಂಗಳೂರು, ಜು.2: ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ದೃಷ್ಟಿ ವಿಕಲಚೇತನ ಮಕ್ಕಳಿಗೆ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಜ್ಯ ಪಠ್ಯಕ್ರಮದಡಿಯಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡಲಾಗುವುದು.  ಜೊತೆಗೆ ಸಂಗೀತ, ಕರಕುಶಲ, ಕಂಪ್ಯೂಟರ್ ಹಾಗೂ ವಿವಿಧ ಆಟೋಟಗಳಲ್ಲಿ ತರಬೇತಿ ನೀಡಲಾಗುವುದು. 18 ರಿಂದ 30 ವರ್ಷದೊಳಗಿನ ದೃಷ್ಟಿ ವಿಕಲಚೇತನರಿಗೆ 6 ತಿಂಗಳ ಅವಧಿಯ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವುದು.

ತರಬೇತಿ ಪಡೆಯಲಿಚ್ಚಿಸುವವರು ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆ, ನಂ. 69, 1ನೇ ಮುಖ್ಯ ರಸ್ತೆ, ನೆಹರು ನಗರ, ಎಸ್.ಸಿ.ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-560020 ಅಥವಾ ಮೊಬೈಲ್ ಸಂ: 97411-22706, 8317329908 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್. ಪರಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News