×
Ad

ವೈಟ್ ಟಾಪಿಂಗ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Update: 2021-07-03 20:33 IST

ಬೆಂಗಳೂರು, ಜು.3: ಬಿಬಿಎಂಪಿಯ ಸಂಜಯ್‍ನಗರದ 80 ಅಡಿ ರಸ್ತೆಯಲ್ಲಿ ಅಶ್ವಥ್ ನಗರದ ದ್ವಾರದಿಂದ ಎಂ.ಎಸ್.ರಾಮಯ್ಯ ಆಸ್ಪತ್ತೆಯ ರಸ್ತೆಯ ಸ್ನಿಗಲ್‍ವರೆಗೆ  ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಾಲಿಕೆಯ ಯೋಜನಾ ವಿಭಾಗದಿಂದ ಸಂಜಯ್‍ನಗರದ 80 ಅಡಿ ರಸ್ತೆಯು ಸುಮಾರು 1 ಕಿ.ಮೀ ಇದ್ದು, 9.82 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಮೇ ಅಂತ್ಯದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು 30 ದಿನಗಳಲ್ಲಿ ಎರಡೂ ಬದಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಒಂದು ಬದಿಯಲ್ಲಿ ಕ್ಯೂರಿಂಗ್ ಆಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಮತ್ತೊಂದು ಬದಿ ಕ್ಯೂರಿಂಗ್ ಬಾಕಿಯಿದೆ. ಅದಲ್ಲದೆ ರಸ್ತೆಯ ಎರಡೂ ಬದಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ನೀರಿನ ಪೈಪ್ ಲೈನ್, ಬೆಸ್ಕಾಂ, ಒಎಫ್‍ಸಿ ಕೇಬಲ್‍ಗಳಿಗೆ ಡಕ್ಟ್ಸ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿ ಬಾಕಿಯಿದ್ದು, 35 ರಿಂದ 40 ದಿನಗಳಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News