ಪತ್ನಿಯನ್ನು ಹತ್ಯೆಗೈದು ಪಾರ್ಶ್ವ ವಾಯುವಿನ ಕಥೆ ಕಟ್ಟಿದ್ದ ಪತಿಯ ಬಂಧನ
Update: 2021-07-04 18:29 IST
ಬೆಂಗಳೂರು, ಜು.4: ಪತ್ನಿಯನ್ನು ಹತ್ಯೆಗೈದು ಪಾಶ್ರ್ವವಾಯು ಎಂದು ಬಿಂಬಿಸಿದ್ದ ಪತಿಯ ನಾಟಕ ಬಯಲಾಗಿ ಮೈಕೋ ಲೇಔಟ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಿಟಿಎಂ ಲೇಔಟ್ 2ನೆ ಹಂತದಲ್ಲಿ ಕಳೆದ ಜೂ.29ರಂದು ಪತ್ನಿ ಸಾನಿಯಾ ಮೇಲೆ ಹಲ್ಲೆ ಮಾಡಿ ಆಕೆಯನ್ನು ಹತ್ಯೆಗೈದ ಬಳಿಕ ಪಾರ್ಶ್ವ ವಾಯು ಎಂದು ಬಿಂಬಿಸಿದ್ದ ಪತಿಯ ನಾಟಕ ಆಕೆಯು ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ.
ಜಗಳದ ವೇಳೆ ಪತಿ ಅಜಿತ್ ಪತ್ನಿ ತಲೆಗೆ ಬಲವಾಗಿ ಹೊಡೆದಿದ್ದ. ಬಳಿಕ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪಾರ್ಶ್ವ ವಾಯು ಎಂದಿದ್ದ. ಸಾನಿಯಾ ಅಂತ್ಯಕ್ರಿಯೆಗೆ ಬಂದಿದ್ದ ತಾಯಿಗೆ ಈ ಬಗ್ಗೆ ಶಂಕೆ ವ್ಯಕ್ತವಾಗಿತ್ತು.