×
Ad

ಬೆಂಗಳೂರು: ಮಾರಕಾಸ್ತ್ರ ತೋರಿಸಿ ಪೆಟ್ರೋಲ್ ಬಂಕ್ ದರೋಡೆ; ದುಷ್ಕರ್ಮಿಗಳಿಗೆ ಶೋಧ

Update: 2021-07-04 21:19 IST
Twitter/@akfpt

ಬೆಂಗಳೂರು, ಜು.4: ಪೆಟ್ರೋಲ್ ಬಂಕ್‍ಗೆ ನುಗ್ಗಿ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ 43 ಸಾವಿರ ನಗದನ್ನು ಕಸಿದು ಪರಾರಿಯಾಗಿರುವ 7 ಮಂದಿ ದರೋಡೆಕೋರರ ಬಂಧನಕ್ಕಾಗಿ ಪೂರ್ವ ವಿಭಾಗದ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಕಾಮರಾಜ ರಸ್ತೆ ಮತ್ತು ಚರ್ಚ್ ರಸ್ತೆ ಜಂಕ್ಷನ್‍ನಲ್ಲಿರುವ ಪೆಟ್ರೋಲ್ ಬಂಕ್‍ಗೆ ಜು.3ರ ಮುಂಜಾನೆ ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಮೂರು ಬೈಕ್‍ಗಳಲ್ಲಿ 7 ಮಂದಿ ದರೋಡೆಕೋರರರು ಬಂದಿದ್ದಾರೆ. ಆ ಸಂದರ್ಭದಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಪೆಟ್ರೋಲ್ ಹಾಕುತ್ತಿದ್ದನು.

ಉಳಿದ ಸಿಬ್ಬಂದಿ ಕಚೇರಿಯಲ್ಲಿದ್ದರು. ತಕ್ಷಣ ದರೋಡೆಕೋರರು ಸಿಬ್ಬಂದಿಗೆ ಬೆದರಿಸಿ 43 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ಫುಟೇಜ್‍ಗಳನ್ನು ಪಡೆದುಕೊಂಡಿರುವ ಭಾರತೀನಗರ ಪೊಲೀಸರು ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈಗಾಗಲೇ ಕಾರ್ಯಾಚರಣೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News