ಜುಲೈನಲ್ಲಿ 92,849 ಕೋಟಿ ರೂ. ಜಿಎಸ್ಟಿ ಸಂಗ್ರಹ: ಈ ವರ್ಷದ ಅತ್ಯಂತ ಕನಿಷ್ಠ ಮಾಸಿಕ ಸಂಗ್ರಹ

Update: 2021-07-06 16:54 GMT

ಹೊಸದಿಲ್ಲಿ,ಜು.12: ಜುಲೈ ತಿಂಗಳಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಸಂಗ್ರವು 92,849 ಕೋಟಿ ರೂ.ಗೆ ಕುಸಿದಿದ್ದು, ಇದು ಈ ವರ್ಷದ ಅತ್ಯಂತ ಕನಿಷ್ಠ ಮಾಸಿಕ ಸಂಗ್ರಹಣೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ಮಂಗಳವಾರ ತಿಳಿಸಿದೆ. ಎಂಟು ತಿಂಗಳ ಬಳಿಕ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿಗಿಂತಲೂ ಕಡಿಮೆಯಾಗಿರುವುದು ಇದೇ ಮೊದಲ ಸಲವೆಂದು ಅದು ಹೇಳಿದೆ.

ಎಪ್ರಿಲ್ನಲ್ಲಿ 1.41 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿತ್ತು ಮತ್ತು ಮಾರ್ಚ್ನಲ್ಲಿ 1.24 ಲಕ್ಷ ಕೋಟಿ ರೂ.ಆಗಿತ್ತು.
   
ಜೂನ್ನಲ್ಲಿ ಸಂಗ್ರಹವಾದ ಮೊತ್ತದಲ್ಲಿ 16,424 ಕೋಟಿ ರೂ. ಕೇಂದ್ರೀಯ ಜಿಎಸ್ಟಿಯಿಂದ ಬಂದಿದೆ. 20,397 ಕೋಟಿ ರೂ. ರಾಜ್ಯ ಜಿಎಸ್ಟಿಯಿಂದ ದೊರೆತಿದೆ ಹಾಗೂ 49,079 ಕೋಟಿ ರೂ. ಸಮಗ್ರ (ಇಂಟಿಗ್ರೇಟೆಡ್) ಜಿಎಸ್ಟಿ ಮೂಲಕ ಸಂಗ್ರಹವಾಗಿದೆ ಎಂದು ಕೇಂದ್ರ ಸರಕಾರದ ದತ್ತಾಂಶಗಳು ತಿಳಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅದೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹವು ಶೇ.2ಕ್ಕಿಂತಲೂ ಅಧಿಕವಾಗಿತ್ತು.
 
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಮೇ ತಿಂಗಳಲ್ಲಿ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಭಾಗಶಃ ಹಾಗೂ ಪೂರ್ಣ ಪ್ರಮಾಣದ ಲಾಕ್ಡೌನ್ ಘೋಷಿಸಿದ್ದರಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ಕುಸಿತ ವುಂಟಾಗಿರುವುದಾಗಿ ಸಚಿವಾಲಯ ತಿಳಿಸಿದೆ. ಜೂನ್ತಿಂಗಳಲ್ಲಿ ಲಭ್ಯವಾಗುವ ಜಿಎಸ್ಟಿ ದತ್ತಾಂಶಗಳು ಮೇ ತಿಂಗಳಲ್ಲಿ ನಡೆದ ವಹಿವಾಟುಗಳಿಗೆ ಸಂಬಂಧಿಸಿದ್ದಾಗಿವೆ.
 
2021ರ ಎಪ್ರಿಲ್ ತಿಂಗಳುಗಳಲ್ಲಿ 5.88 ಕೋಟಿ ಇ-ವೇ ಬಿಲ್ಗಳು ಸೃಷ್ಟಿಯಾಗಿದ್ದರೆ ಮೇ ತಿಂಗಳಲ್ಲಿ 3.99 ಕೋಟಿ ಇ-ವೇ ಬಿಲ್ಗಳು ಸೃಷ್ಟಿಯಾಗಿರುವುದಾಗಿ ವಿತ್ತ ಸಚಿವಾಲಯದ ಪತ್ರಿಕಾ ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News