ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ರವೂಫುದ್ದೀನ್ ಕಚೇರಿವಾಲೆ ಪದಗ್ರಹಣ
Update: 2021-07-08 22:26 IST
ಬೆಂಗಳೂರು, ಜು.8: ರಾಜ್ಯ ಹಜ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರವೂಫುದ್ದೀನ್ ಕಚೇರಿವಾಲೆ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಹಾಗೂ ಹಜ್ ಸಮಿತಿಯ ಉಸ್ತುವಾರಿ ಎನ್. ರವಿಕುಮಾರ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಮುಜಾಮಿಲ್ ಬಾಬ, ಪ್ರಧಾನ ಕಾರ್ಯದರ್ಶಿ ಸಲಾಂ ಅಹಮದ್, ಬೆಂ.ನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಕಬೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಮೀರಾ ಮೊದ್ದೀನ್, ಶೇಖ್ ಅಹಮದ್, ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷರಾದ ಆಸಿಫ್ ಸೇಠ್, ಟಿಪ್ಪು ಸುಲ್ತಾನ್, ಹಜ್ ಸಮಿತಿ ಸದಸ್ಯರಾದ ಸೈಯದ್ ಸಲಾಂ, ಚಾಂದ್ ಪಾಷಾ, ಮುಹೀನುದ್ದೀನ್, ಶಮೀಝ್ ಅಹಮದ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.