'ಹಿಂದುಳಿದ ಅಭ್ಯರ್ಥಿಗಳಿಗೆ ಅಧಿಕಾರ ನೀಡಿ ಅವರಿಂದಲೇ ಕೋಮುವಾದ ಉತ್ತೇಜಿಸುವ ಕೆಲಸ ಮಾಡಿಸಿದರೆ ಅದಕ್ಕೇನು ಅರ್ಥವಿದೆ?'

Update: 2021-07-10 05:36 GMT

ಬೆಂಗಳೂರು, ಜು.10: ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನ ನೀಡಲಾಗಿದ್ದು, ಇದು ಪ್ರಧಾನಿ ಮೋದಿಯವರ ಹೆಗ್ಗಳಿಕೆ ಎಂದು ಬಿಜೆಪಿಯ ಕೆಲವರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಹಿಂದುಳಿದ ಅಭ್ಯರ್ಥಿಗಳಿಗೆ ಅಧಿಕಾರ ನೀಡಿ ಮತ್ತೆ ಅವರಿಂದಲೇ ಕೋಮುವಾದವನ್ನು ಉತ್ತೇಜಿಸುವಂತಹ ಕೆಲಸ ಮಾಡಿದರೆ ಅದಕ್ಕೆ ಏನಾದರೂ ಅರ್ಥವಿದೆಯೇ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಇನ್ನು ಹೆಣ್ಣು ಮಕ್ಕಳ ಕೈಗೆ ಶಿಕ್ಷಣ ಮತ್ತು ಅಧಿಕಾರ ನೀಡಿದರೆ ಬದಲಾವಣೆ ತರಬಹುದು ಎಂದು ಬಾಬಾ ಸಾಹೇಬರು ಬಲವಾಗಿ ನಂಬಿದ್ದರು. ಆದರೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿಲ್ಲದ ಮತ್ತು ಕೋಮು ಪ್ರಚೋದನೆಯಲ್ಲೇ ಮುಳುಗಿರುವಂತಹವರಿಗೆ ಅಧಿಕಾರ ಕೊಟ್ಟರೆ ಅವರು ಬಾಬಾ ಸಾಹೇಬರ ಮಾತಿನ ಆಶಯದಂತೆ ಕೆಲಸ ಮಾಡುತ್ತಾರೆಂಬುದು ಸುಳ್ಳು ಎಂದವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News