×
Ad

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘನೆ: 4 ಕೋಟಿ ರೂ. ದಂಡ ಸಂಗ್ರಹ

Update: 2021-07-11 23:41 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘನೆ ಮಾಡಿರುವ ಸಾರ್ವಜನಿಕರಿಂದ ಪಶ್ಚಿಮ ವಿಭಾಗ ಪೊಲೀಸರು ಸುಮಾರು 4 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.

ಮಾಸ್ಕ್ ಧರಿಸದಿರುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳದಿರುವುದು ಸೇರಿ ಕೋವಿಡ್ ನಿಯಮ ಉಲ್ಲಂಘಸಿದ ಆರೋಪದ ಮೇಲೆ ಈ ಮೊತ್ತ ಸಂಗ್ರಹವಾಗಿದೆ.

ಕೋವಿಡ್ ಮೊದಲ ಅಲೆಯ 2020ರ ಜು.4ರಿಂದ 2021ರ ಎಪ್ರಿಲ್ 1ರವರೆಗೆ 1,38,505 ಪ್ರಕರಣ ದಾಖಲಿಸಿ 3,46,26,250 ರೂ. ದಂಡ ಸಂಗ್ರಹಿಸಲಾಗಿದೆ. ಇನ್ನು, ಕೊರೋನ ಎರಡನೆ ಅಲೆಯ ಎಪ್ರಿಲ್ 1ರಿಂದ ಜುಲೈ 10ರ ವರೆಗೆ 27,654 ಪ್ರಕರಣ ದಾಖಲಿಸಿ 69,13,500 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News