ಕಠಿಣ ಪ್ರತಿಬಂಧನೆ ಬೇಕಾಗಿದೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಬೆಂಗಳೂರು, ಜು.12: ಕೋವಿಡ್ ಸಂಬಂಧ ಆರೋಗ್ಯ ದೃಷ್ಟಿಯಿಂದ ಕಠಿಣ ಪ್ರತಿಬಂಧನೆ ಜಾರಿಗೊಳಿಸಿದರೆ ಒಳ್ಳೆಯದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.
ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಟ್ರೇಲಿಯಾ ಸೇರಿದಂತೆ ಇನ್ನಿತರೆ ದೇಶದಲ್ಲಿ ಲಾಕ್‍ಡೌನ್ ಈಗಲೂ ಜಾರಿಯಲ್ಲಿದೆ. ಕೇವಲ 200 ಪ್ರಕರಣಗಳು ಬೆಳಕಿಗೆ ಬಂದರೂ, ಲಾಕ್‍ಡೌನ್, ಕಫ್ರ್ಯೂ ಜಾರಿಗೆ ತರಲಾಗುತ್ತದೆ. ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದೇ ಆಗಿದೆ ಎಂದರು.
ಬ್ಲಾಕ್ ಫಂಗಸ್ ಸೋಂಕಿನ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯೇ ವಿಶೇಷ ಗಮನ ಇಟ್ಟಿದೆ. ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ಈ ಸೋಂಕಿ ಕಾಣಿಸಿಕೊಳ್ಳುತ್ತಿದೆ. ಕೆಲ ಔಷಧೀಯ ಪ್ರಭಾವದಿಂದಲೂ ಇದು ಬರುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಆರೋಗ್ಯ ತಜ್ಞರು ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಹತೋಟಿಯಲ್ಲಿದೆ. ಆದರೆ, ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಸೋಂಕಿನ ಪ್ರಮಾಣ ಏರಿಕೆ ಆಗುತ್ತಿರುವುದು ಆತಂಕವಾಗಿದ್ದು, ಈ ಸಂಬಂಧ ವಿಶೇಷ ನಿಗಾವಹಿಸಲಾಗಿದೆ ಎಂದು ತಿಳಿಸಿದರು.