ನಾವೀಗ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಎಚ್ಚರಿಕೆ

Update: 2021-07-15 14:43 GMT
photo: twitter/@airnewsalerts

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 15: ಜಗತ್ತು ಈಗ ಕೋವಿಡ್-19 ಮೂರನೇ ಅಲೆಯ ಆರಂಭಿಕ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಗುರುವಾರ ಎಚ್ಚರಿಸಿದ್ದಾರೆ. ಜಗತ್ತಿನಾದ್ಯಂತ ಡೆಲ್ಟಾ ಪ್ರಭೇದದ ಸೋಂಕು ಹೆಚ್ಚುತ್ತಿರುವಂತೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

‘‘ದುರದೃಷ್ಟವಶಾತ್.... ನಾವೀಗ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ’’ ಎಂದು ಅವರು ಹೇಳಿದರು.

‘‘ಡೆಲ್ಟಾ ಪ್ರಭೇದದ ಸೋಂಕು ಹರಡುತ್ತಿದೆ. ಅದರ ಜೊತೆಗೆ ಹೆಚ್ಚುತ್ತಿರುವ ಜನಸಂಚಾರ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಅಸಮರ್ಪಕ ಬಳಕೆಯೂ ಸೇರಿಕೊಂಡಿದೆ. ಇದು ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ’’ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಲಸಿಕೆ ನೀಡುವ ದರದಲ್ಲಿ ಆಗಿರುವ ಹೆಚ್ಚಳದಿಂದಾಗಿ ಕೊರೋನ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿಯೂ ನಿರಂತರ ಇಳಿಕೆಯಾಗಿದೆ. ಆದರೆ ಈ ಧನಾತ್ಮಕ ಪ್ರವೃತ್ತಿ ಈಗ ತಿರುವು ಮುರುವಾಗಿದೆ ಎಂದು ಅವರು ಹೇಳಿರುವುದಾಗಿ ‘ಯುಎನ್ ನ್ಯೂಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News