ಬೆಂಗಳೂರು: ಕಳವು ಪ್ರಕರಣ; ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು
Update: 2021-07-16 18:49 IST
ಬೆಂಗಳೂರು, ಜು.16: ಬೈಕ್ ಕಳವು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ವಿಜಯನಗರ ಠಾಣಾ ಪೊಲೀಸರು 2 ಲಕ್ಷ 20 ಸಾವಿರ ಮೌಲ್ಯದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ವಿಜಯನಗರದ ಕಾರ್ತಿಕ್ ಹಾಗೂ ಕಬೀರ್ ಪಾಷ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮೇ 8ರಂದು ರಾತ್ರಿ ಆರ್‍ಪಿಸಿ ಬಡಾವಣೆಯ 9ನೆ ಅಡ್ಡರಸ್ತೆಯ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಬಂಧನದಿಂದ ವಿಜಯನಗರ, ಕೆಪಿ ಅಗ್ರಹಾರ, ತಲಘಟ್ಟಪುರ ಪೆÇಲೀಸ್ ಠಾಣಾ ವ್ಯಾಪ್ತಿಯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.