ಬೆಂಗಳೂರು: ಮದ್ಯ ಸೇವನೆ ಬಿಟ್ಟ 100ಕ್ಕೂ ಅಧಿಕ ಪೊಲೀಸರು; ಅಲೋಕ್ ಕುಮಾರ್

Update: 2021-07-16 17:45 GMT

ಬೆಂಗಳೂರು, ಜು.16: ಬೆಂಗಳೂರಿನ ಕೆಎಸ್‌ಆರ್‌ಪಿ ವಿಭಾಗದ ನೂರಕ್ಕೂ ಅಧಿಕ ಪೊಲೀಸರು ಮದ್ಯ ಸೇವನೆಯ ಚಟದಿಂದ ಹೊರಬಂದಿದ್ದು, ಕಳೆದ ಒಂದೂವರೆ ವರ್ಷದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ್ದಾರೆ ಎಂದು ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ  ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ಸೇವಾ ಕವಾಯತಿನಲ್ಲಿ ಭಾಗಿಯಾಗಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ 22 ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಂದೂವರೆ ವರ್ಷದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ್ದಾರೆ. ತೂಕ ಇಳಿಕೆ ಮಾಡುವುದೂ ಬೊಜ್ಜು ಕರಗಿಸುವುದನ್ನು 2ರಿಂದ3 ತಿಂಗಳಲ್ಲಿ ಸುಧಾರಣೆ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದರು.

ಅಲ್ಲದೆ, 100ಕ್ಕೂ ಹೆಚ್ಚು ಸಿಬ್ಬಂದಿ ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಸಂಪೂರ್ಣವಾಗಿ ಮದ್ಯವ್ಯಸನ ಬಿಟ್ಟಿದ್ದಾರೆ. ಸಿಬ್ಬಂದಿ ಕುಂದುಕೊರತೆಗಳನ್ನು ಪರಿಶೀಲಿಸಲಾಗಿದೆ ಎಂದ ಅವರು,ಪೊಲೀಸರ ಆರೋಗ್ಯ ನಿಗಾ ಕವಾಯತು ನಡೆಸಿದ್ದೇವೆ. ಸಿಗರೇಟ್, ಆಲ್ಕೋಹಾಲ್‌ನಂತಹ ಚಟದ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇಂತಹ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇವೆ. ಬಹಳಷ್ಟು ಮಂದಿ ಸುಧಾರಣೆ ಕಂಡಿದ್ದಾರೆ ಎಂದು ನುಡಿದರು.

ಏನಿದು ಆರೋಗ್ಯ ಸುಧಾರಣೆ ಕ್ರಮ?

ಕೆಎಸ್ಸಾಆರ್ಪಿ ಪೊಲೀಸ್ ಸಿಬ್ಬಂದಿ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಅಲೋಕ್ ಕುಮಾರ್ ಅವರು ಹೆಲ್ತ್ ಮಾನಿಟರಿಂಗ್ ಸಿಸ್ಟಂ ಹಾಗೂ ವೇಯ್ಟ್ ಮಾನಿಟರಿಂಗ್ ಸಿಸ್ಟಂ ಅನುಷ್ಠಾನ ಮಾಡಿದ್ದರು. ಇದರಿಂದ ಫಿಟ್ನೆಸ್ ಇಲ್ಲದ ಸಿಬ್ಬಂದಿಯನ್ನು ಮೂರು ಪ್ರತ್ಯೇಕ ತಂಡಗಳಾಗಿ ವಿಂಗಡಿಸಿ ಅವರಿಗೆ ಪುಡ್‌ಚಾರ್ಟ್ ನೀಡಿ ದೈಹಿಕ‌ ಆರೋಗ್ಯ ಕಾಪಾಡಿಕೊಳ್ಳಲಾಗುತ್ತದೆ. 

ಅಷ್ಟೇ ಅಲ್ಲದೆ, ಇದರಲ್ಲಿ ಎ ಗುಂಪಿನಲ್ಲಿ ಆರೋಗ್ಯ ಸಮಸ್ಯೆ ಇಲ್ಲದೆ ಇರುವವರು, ಬಿ ಗುಂಪಿನಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಇರುವವರು ಹಾಗೂ ಡಿ ಅಡಿಕ್ಷನ್ ಆಗಿರುವವರನ್ನು ಸಿ ಗುಂಪಿಗೆ ಸೇರಿಸಲಾಗುತ್ತದೆ.ಸಿಬ್ಬಂದಿಯ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಆನಂತರ ಸೇವಾ ಕವಾಯತು ನಡೆಸಿ ತೂಕ ಇಳಿಸಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ಪ್ರದಾನ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News