×
Ad

ಸೂಫಿ ಶರಣ ಗುರುಖಾದರಿ ಪೀರ್ ಬಸವತತ್ವದ ಪ್ರಚಾರಕ: ರಂಜಾನ್ ದರ್ಗಾ

Update: 2021-07-18 19:16 IST

ಬೆಂಗಳೂರು, ಜು. 18: `ಲಿಂಗಾಯತ ಸಮುದಾಯ 19ನೆ ಶತಮಾನದಲ್ಲಿ ಬಸವಣ್ಣನನ್ನು ಎತ್ತುಯೆಂದು ತಿಳಿದಿದ್ದ ಸಂದರ್ಭದಲ್ಲಿ ಸೂಫಿಶರಣ ಗುರು ಖಾದರಿ ಪೀರ್ ಬಸವಣ್ಣ ತತ್ವಗಳನ್ನು ತಮ್ಮ ಸೂಫಿಗೀತೆಗಳ ಮೂಲಕ ಪ್ರಚಾರ ಮಾಡಿದ್ದರು' ಎಂದು ಹಿರಿಯ ಪತ್ರಕರ್ತ ರಂಜಾನ್ ದರ್ಗಾ ತಿಳಿಸಿದ್ದಾರೆ. 

ರವಿವಾರ ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೆಬಿನಾರ್‍ನಲ್ಲಿ ಸೂಫಿ ಶರಣ ಗುರು ಖಾದರಿ ಪೀರ್ ಕುರಿತು ಮಾತನಾಡಿದ ಅವರು, `1822ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲಿ ಜನಿಸಿದ ಖಾದರಿ ಮೂಲತಃ ಜಮೀನ್ದಾರಿರಾಗಿದ್ದರು. ಅವರು ತಮ್ಮ ಜಮೀನನ್ನು ಬಡವರಿಗೆ ಹಂಚಿ ಬಸವತತ್ವದ ಅಡಿಯಲ್ಲಿ ಸಮಾನತೆ, ಮಾನವೀಯತೆಗಾಗಿ ಶ್ರಮಿಸಿದರು' ಎಂದು ಅಭಿಪ್ರಾಯಿಸಿದ್ದಾರೆ.

ಬಸವಣ್ಣ ತಮ್ಮ ವಚನಗಳ ಮೂಲಕ ಜಾತಿ, ಚಾತುವರ್ಣ ವ್ಯವಸ್ಥೆ, ಮೌಢ್ಯತೆಯ ವಿರುದ್ಧ ಸಮಾನತೆ, ವೈe್ಞÁನಿಕ ಸಂದೇಶವನ್ನು ಸಾರಿದರು. ಅದೇ ಮಾರ್ಗದಲ್ಲಿ ಸಾಗಿದ ಸೂಫಿ ಶರಣ ಖಾದರಿ ಪೀರ್‍ರವರು ತಮ್ಮ 400ಕ್ಕೂ ಹೆಚ್ಚು ಸೂಫಿ ಗೀತೆಗಳ ಮೂಲಕ ತಮ್ಮದೇ ರೀತಿಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆಂದು ಅವರು ತಿಳಿಸಿದ್ದಾರೆ. 

ಸೂಪಿಪಶರಣ ಗುರುಖಾದರಿ ಪೀರ್ ಬಸವ ತತ್ವವನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಿಗೆ ಕಾಲ್ನಡಿಗೆ, ಕುದುರೆ ಮೂಲಕ ಸಂಚರಿಸಿ ತಮ್ಮ ಸೂಫಿ ಗೀತೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕೋಮು ಸೌಹಾರ್ದತೆಗೆ ಪ್ರಮುಖ ಕೊಂಡಿಯೆಂದು ಅವರು ತಿಳಿಸಿದ್ದಾರೆ. ಈ ವೇಳೆ ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಅಧ್ಯಕ್ಷ ನಟರಾಜ್ ಹಾಗೂ ಟ್ರಸ್ಟ್‍ನ ನಾಗೇಂದ್ರ ಕುಮಾರ್, ಆರ್.ನಾಗೇಶ್ ಅರಳಕುಪ್ಪೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News