×
Ad

ಬೆಂಗಳೂರು: ಸಿಸಿ ಕ್ಯಾಮೆರಾ ತಿರುಚಿ ಕಳವು; ದೂರು

Update: 2021-07-18 23:26 IST

ಬೆಂಗಳೂರು, ಜು. 18: ಇಲ್ಲಿನ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗೆ ಟಾರ್ಚ್‍ನಲ್ಲಿ ಬೆಳಕು ಬಿಟ್ಟು ಸ್ಕೂಟರ್ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಿನ್ನೆ ತಡರಾತ್ರಿ ಮುಕ್ತಾಂಬಿಕ ಬಡಾವಣೆಯ ವೇಣು ಎಂಬವರ ಮನೆಯ ಕಾಪೌಂಡ್ ಒಳಗಡೆ ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿ ದೂರು ನೀಡಲಾಗಿದ್ದು, ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News