ಕ್ಯಾಪ್‍ಜೆಮಿನಿ ವತಿಯಿಂದ ವೈದ್ಯಕೀಯ ಸಲಕರಣೆಗಳ ಪೂರೈಕೆ: ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘನೆ

Update: 2021-07-19 14:23 GMT

ಬೆಂಗಳೂರು, ಜುಲೈ 19: ಕ್ಯಾಪ್‍ಜೆಮಿನಿ ಟೆಕ್ನಾಲಜಿ ಸರ್ವಿಸಸ್ ಇಂಡಿಯಾ ಲಿಮಿಟೆಡ್ ವತಿಯಿಂದ ಇಂದು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ವಿಕ್ಟೋರಿಯಾ ಹಾಗೂ ಚರಕ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 400 ಎಲ್‍ಎಂಪಿ  ಆಕ್ಸಿಜನ್ ಘಟಕಗಳನ್ನು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು  ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕೋವಿಡ್ 19 ಎರಡನೇ ಅಲೆಯ ನಿಯಂತ್ರಣ ಹಾಗೂ ಚಿಕಿತ್ಸೆಗೆ ಖಾಸಗಿ ವಲಯ  ಸರ್ಕಾರದೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.  ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಇಂತಹ ಕ್ರಮಗಳನ್ನು ಕೈಗೊಂಡಿರುವುದು ಅನುಕರಣೀಯ. ಕೋವಿಡ್ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸಂಘಸಂಸ್ಥೆಗಳು ಸಹಕಾರ ಅತ್ಯಗತ್ಯ ಎಂದರು.    

ಕ್ಯಾಪ್ ಜೆಮಿನಿ ಸಿಇಒ ಅಶ್ವಿನ್  ಯಾರ್ದಿ ಮಾತನಾಡಿ ಕೋವಿಡ್ 19 ಸಾಂಕ್ರಾಮಿಕವನ್ನು ನಿರ್ವಹಿಸಲು ಕ್ಯಾಪ್ ಜೆಮಿನಿ ಸಂಸ್ಥೆಯು ದೇಶದಾದ್ಯಾಂತ ರಾಜ್ಯ ಸರ್ಕಾರಗಳೊಂದಿಗೆ  ವೈದ್ಯಕೀಯ ಉಪಕರಣಗಳನ್ನು ಒದಗಿಸುವ  ಮೂಲಕ ನೆರವಿನ ಹಸ್ತವನ್ನು ಚಾಚಿದೆ.  ಬೆಂಗಳೂರಿನಲ್ಲಿ ಸ್ಥಾಪಿಸಿರುವ ನೂತನ ಆಕ್ಸಿಜನ್ ಘಟಕಗಳು ಹೆಚ್ಚುತ್ತಿರುವ   ವೈದ್ಯಕೀಯ  ಆಕ್ಸಿಜನ್ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದರು.  

ಇದೇ ಸಂದರ್ಭದಲ್ಲಿ 108 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.   

ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಕ್ಯಾಪ್ ಜೆಮಿನಿ ಸಂಸ್ಥೆಯ ಹಿರಿಯ ನಿರ್ದೇಶಕ ವಿಶ್ವನಾಥ್ ರಾಜೇಂದ್ರ ಹಾಗೂ ಮುರಳಿ ಶಂಕರನಾರಾಯಣನ್, ಗ್ರಾಮೀನಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News