ಬೆಂಗಳೂರು: ರಾತ್ರಿ 9ರವರೆಗೆ ಮೆಟ್ರೊ ಸಂಚಾರ ವಿಸ್ತರಣೆ
Update: 2021-07-19 20:35 IST
ಬೆಂಗಳೂರು, ಜು.19: ನಗರದಲ್ಲಿ ರಾತ್ರಿ 8ಗಂಟೆವರೆಗೆ ಮಾತ್ರ ಸೇವೆಯಲ್ಲಿದ್ದ ಮೆಟ್ರೊ ರೈಲು ಸಂಚಾರ ಇಂದಿನಿಂದ (ಜುಲೈ 19) ರಾತ್ರಿ 9ರವರೆಗೆ ಇರಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು, ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದಿನದಲ್ಲಿ 14 ತಾಸುಗಳು ಮೆಟ್ರೊ ರೈಲು ಸೇವೆ ಇರಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದೆಂದು ತಿಳಿಸಿದೆ.
ಬೆಳಗ್ಗೆ ಹಾಗೂ ಸಂಜೆಯ ದಟ್ಟಣೆ ಅವಧಿಯಲ್ಲಿ ಐದು ನಿಮಿಷಕ್ಕೊಂದು ಹಾಗೂ ಸಾಮಾನ್ಯ ಅವಧಿಯಲ್ಲಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಾಹಿತಿ ನೀಡಿದೆ.