ಎರಡನೇ ಏಕದಿನ: ಭಾರತಕ್ಕೆ 276 ರನ್ ಗುರಿ ನೀಡಿದ ಶ್ರೀಲಂಕಾ

Update: 2021-07-20 14:43 GMT
ಚರಿತ್ ಅಸಲಂಕ, photo: AP

ಕೊಲಂಬೊ: ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಸಾಧಾರಣ ಪ್ರಯತ್ನದ ಹೊರತಾಗಿಯೂ ಆತಿಥೇಯ ಶ್ರೀಲಂಕಾ ಮಂಗಳವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ 276 ರನ್ ಗುರಿ ನೀಡಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್  ಕಲೆ ಹಾಕಿತು. ಮೊದಲ ಪಂದ್ಯದಂತೆಯೇ ಲಂಕಾದ ಹೆಚ್ಚಿನ ಬ್ಯಾಟ್ಸ್ ಮನ್ ಗಳು ಉತ್ತಮ ಆರಂಭ ಪಡೆದಿದ್ದರೂ ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾಗಿದ್ದಾರೆ.

ಇಂದಿನ ಪಂದ್ಯದಲ್ಲಿ ಅವಿಷ್ಕಾ ಫೆರ್ನಾಂಡೊ(50, 71ಎಸೆತ) ಹಾಗೂ ಚರಿತ್ ಅಸಲಂಕ(65, 68 ಎಸೆತ) ಅರ್ಧಶತಕಗಳ ಕೊಡುಗೆ ನೀಡಿದರು. ಚಾಮಿಕಾ ಕರುಣರತ್ನೆ(ಔಟಾಗದೆ 44)ಮತ್ತೊಮ್ಮೆ ಸಾಂದರ್ಭಿಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 270ರ ಗಡಿ ದಾಟಿಸಿದರು.

ಚಹಾಲ್(3-50)ಯಶಸ್ವಿ ಬೌಲರ್ ಎನಿಸಿಕೊಂಡರು. ವೇಗದ ಬೌಲರ್ ಗಳಾದ ದೀಪಕ್ ಚಹಾರ್(2-53) ಹಾಗೂ ಭುವನೇಶ್ವರ ಕುಮಾರ್ (3-54)ಕೂಡ ಐದು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News