ಚೀನಾ: ಗಂಟೆಗೆ 600 ಕಿ.ಮೀ. ಓಡುವ ‘ಮ್ಯಾಗ್ಲೆವ್’ ರೈಲು ಅನಾವರಣ

Update: 2021-07-20 15:32 GMT
photo: twitter/@BraMahlatse

ಬೀಜಿಂಗ್, ಜು. 20: ಚೀನಾವು ಅತಿ ವೇಗದ ‘ಮ್ಯಾಗ್ಲೆವ್’ ರೈಲೊಂದನ್ನು ಅನಾವರಣಗೊಳಿಸಿದೆ. ಇದರ ಗರಿಷ್ಠ ವೇಗ ಗಂಟೆಗೆ 600 ಕಿ.ಮೀ. ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಗರಿಷ್ಠ ವೇಗವು ಈ ರೈಲನ್ನು ಭೂಮಿಯ ಮೇಲೆ ಒಡುವ ಅತ್ಯಂತ ವೇಗದ ವಾಹನವನ್ನಾಗಿ ಮಾಡಿದೆ. ರೈಲನ್ನು ಚೀನಾದಲ್ಲೇ ಅಭಿವೃದ್ಧಿಪಡಿಸಲಾಗಿದ್ದು, ಕರಾವಳಿ ನಗರ ಕಿಂಗಾಡೊದಲ್ಲಿ ನಿರ್ಮಿಸಲಾಗುತ್ತಿದೆ.

ಇಲೆಕ್ಟ್ರೋ-ಮ್ಯಾಗ್ನೆಟಿಕ್ ಶಕ್ತಿಯಿಂದ ಚಲಿಸುವ ರೈಲು, ಚಲಿಸುವಾಗ ಹಳಿಯಿಂದ ಮೇಲೇರುತ್ತದೆ ಹಾಗೂ ಹಳಿಗೂ ರೈಲಿಗೂ ಯಾವುದೇ ಸಂಪರ್ಕವಿರುವುದಿಲ್ಲ.

ಚೀನಾವು ಈ ತಂತ್ರಜ್ಞಾನವನ್ನು ಅತ್ಯಂತ ಸೀಮಿತ ಪ್ರಮಾಣದಲ್ಲಿ ಎರಡು ದಶಕಗಳಿಂದ ಬಳಸುತ್ತಿದೆ. ಶಾಂಘೈಯಲ್ಲಿ ಚಿಕ್ಕ ಮ್ಯಾಗ್ಲೆವ್ ಹಳಿಯೊಂದು ಇದೆ. ಅದು ವಿಮಾನ ನಿಲ್ದಾಣವೊಂದರಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಆದರೆ, ಚೀನಾದಲ್ಲಿ ನಗರಗಳನ್ನು ಅಥವಾ ರಾಜ್ಯಗಳನ್ನು ಸಂಪರ್ಕಿಸುವ ಮೆಗ್ಲೆವ್ ಹಳಿಗಳಿಲ್ಲ. ಶಾಂಘೈ ಮತ್ತು ಚೆಂಗ್ಡು ನಗರಗಳು ಈ ನಿಟ್ಟಿನಲ್ಲಿ ಸಂಶೋಧನೆಗೆ ತೊಡಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News