ಬೆಂಗಳೂರು: ರೌಡಿ ಬಬ್ಲಿ ಹತ್ಯೆ ಪ್ರಕರಣ; ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
Update: 2021-07-22 19:02 IST
ಬೆಂಗಳೂರು, ಜು.22: ಬ್ಯಾಂಕಿಗೆ ಹಾಡುಹಗಲೇ ನುಗ್ಗಿ ರೌಡಿಶೀಟರ್ ಬಬ್ಲಿ ಹತ್ಯೆಗೈದ ಆರೋಪ ಪ್ರಕರಣ ಸಂಬಂಧ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜು.19ರಂದು ಪತ್ನಿ, ಮಗನ ಜೊತೆ ರೌಡಿ ಜೋಸೆಫ್ ಯಾನೆ ಬಬ್ಲಿ ಬ್ಯಾಂಕಿಗೆ ಬೈಕ್‍ನಲ್ಲಿ ಬಂದಿದ್ದಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಬಬ್ಲಿ ಮುಂದಾಗಿದ್ದರೂ ಬೆಂಬಿಡದೇ ಬ್ಯಾಂಕಿಗೆ ನುಗ್ಗಿ ಆತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಹತ್ಯೆ ಬಳಿಕ ಬೈಕ್ ಮೇಲೆ ಮಾರಕಾಸ್ತ್ರಗಳನ್ನು ಎತ್ತಿ ಹಿಡಿದು ದುಷ್ಕರ್ಮಿಗಳು ಸಂಭ್ರಮಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು, ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ರವಿ ಹಾಗೂ ಪ್ರದೀಪ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.