ಕೆ.ವೇದವ್ಯಾಸರಾಯ ಭಟ್

Update: 2021-07-23 14:31 GMT

ಶಿರ್ವ, ಜು.23: ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಹಿರಿಯ ವೈದಿಕರಾದ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್(93) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ದೇವಳದ ಪ್ರತಿಷ್ಠಾ ವರ್ಷ 1942ರಲ್ಲಿ ವೈದಿಕರಾಗಿ ಕ್ಷೇತ್ರಕ್ಕೆ ಆಗಮಿಸಿದ ಇವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಭಜನೆ, ಕೀರ್ತನ, ಹಾಡುಗಾರಿಕೆಯ ಜೊತೆಗೆ ಭಾಗವತರಾಗಿ, ಕಲಾರಾಧಕ ರಾಗಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಯಕ್ಷ ಗಾನ ಕಲಾ ಸಂಘದ ಸ್ಥಾಪಕ ರಾಗಿ, ಭಜನಾ ಮಂಡಳಿಯ ಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಪ್ರತಿಷ್ಠಿತ ಶಿರ್ವ ರೊೀಟರಿಯ ಸ್ಥಾಪಕ ಸದಸ್ಯರಾಗಿದ್ದರು.

ಇವರ ಬಹುಮುಖ ಸೇವೆಗೆ ಸ್ವಾತಂತ್ರ್ಯ ಹೋರಾಟಗಾರ ಕೆ.ಎಲ್.ಶರ್ಮ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅನೇಕ ದೇವಾಲಯ ಗಳು, ಭಜನಾ ಮಂಡಳಿಗಳು ಇವರನ್ನು ಸನ್ಮಾನಿಸಿವೆ. ಇವರು ಓರ್ವ ಪುತ್ರ, ಐವರು ಪುತ್ರಿಯರು ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ