ಬೆಂಗಳೂರು: ಆಡುವಾಗ ಗಣೇಶ ಮೂರ್ತಿ ನುಂಗಿದ ಬಾಲಕ
Update: 2021-07-24 20:35 IST
ಬೆಂಗಳೂರು, ಜು.24: ಮೂರು ವರ್ಷದ ಬಾಲಕನೊಬ್ಬ ಗಣೇಶ ಮೂರ್ತಿಯನ್ನು ನುಂಗಿರುವ ಘಟನೆ ನಗರದಲ್ಲಿ ನಡೆದಿದೆ.
ಆಟವಾಡುತ್ತ ತನ್ನ ಜೊತೆಗಿದ್ದ ಗಣೇಶ ಮೂರ್ತಿಯನ್ನು ನುಂಗಿದ ನಂತರ ಬಾಲಕನಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಬಳಿಕ ಉಗುಳನ್ನು ನುಂಗಲು ಸಾಧ್ಯವಾಗದೆ ಕಣ್ಣೀರು ಹಾಕಿದ್ದಾನೆ.ಇದನ್ನು ಗಮನಿಸಿದ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿದ್ದಾರೆ.
ಎಕ್ಸ್ ರೇ ತೆಗೆದು ನೋಡಿದ ನಂತರ ಗಣೇಶ ಮೂರ್ತಿ ಹೊಟ್ಟೆಯಲ್ಲಿ ಇರುವುದು ಕಂಡು ಬಂದಿದೆ. ನಂತರ ಮಣಿಪಾಲ ಆಸ್ಪತ್ರೆ ವೈದ್ಯರು ಒಂದು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಬಾಲಕನ ಹೊಟ್ಟೆಯಲ್ಲಿದ್ದ 5 ಸೆಂಟಿಮೀಟರ್ ಗಣೇಶ ಮೂರ್ತಿಯನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.