​ಕೋವಿಡ್ ಗುಣಮುಖರಾದವರಲ್ಲಿ ನರರೋಗ ಸಮಸ್ಯೆ ಹೆಚ್ಚಳ: ವೈದ್ಯರ ಹೇಳಿಕೆ

Update: 2021-07-25 04:19 GMT

ಹೊಸದಿಲ್ಲಿ: ಕೋವಿಡ್-19 ಸೋಂಕಿತರಾಗಿ ಗುಣಮುಖರಾದವರಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಸೇರಿದಂತೆ ಹಲವು ನರರೋಗ ಸಮಸ್ಯೆಗಳು ವ್ಯಾಪಕವಾಗಿ ಹೆಚ್ಚುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

"ಮೆದುಳಿನ ರಕ್ತಸ್ರಾವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಿದ್ದು, ಶೇಕಡ 50ರಷ್ಟು ನರವಿಜ್ಞಾನ ವಿಭಾಗಗಳು ಇಂಥ ಪ್ರಕರಣಗಳಿಂದ ಕೂಡಿವೆ" ಎಂದು ದೆಹಲಿಯ ಮೂಲಚಂದ್ ಆಸ್ಪತ್ರೆ ಶನಿವಾರ ಹೇಳಿಕೆ ನೀಡಿದೆ.

ಇಂಥ ಬಹುತೇಕ ಪ್ರಕರಣಗಳಲ್ಲಿ ರೋಗಿಗಳು ಈ ಹಿಂದೆ ಎರಡು- ಮೂರು ತಿಂಗಳ ಅಂತರದಲ್ಲಿ ಕೋವಿಡ್-19 ಸೋಂಕು ಹೊಂದಿದ್ದರು ಎಂದು ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಾ ತಜ್ಞೆ ಡಾ. ಆಶಾ ಬಕ್ಷಿ ಹೇಳಿದ್ದಾರೆ. ಶೇಕಡ 37ರಷ್ಟು ರೋಗಿಗಗಳಲ್ಲಿ ತಲೆನೋವು, ಶೇಕಡ 26ರಷ್ಟು ರೋಗಿಗಗಳಲ್ಲಿ ವಾಸನೆ ಅಥವಾ ರುಚಿ ಕಳೆದುಕೊಳ್ಳುವ ರೋಗಲಕ್ಷಣ ಕಂಡುಬಂದಿದೆ ಎಂದು ವಿವರಿಸಿದ್ದಾರೆ.

ಈ ಪೈಕಿ ಎನ್ಸೆಫಲೋಪತಿ (ಶೇ. 49), ಕೋಮಾ (ಶೇಕಡ 17) ಮತ್ತು ಪಾರ್ಶ್ವವಾಯು (ಶೇಕಡ 6) ಸಮಸ್ಯೆ ವ್ಯಾಪಕವಾಗಿ ಕಂಡುಬಂದಿದೆ. ನರರೋಗ ಸಮಸ್ಯೆಗಳು ಅಥವಾ ರೋಗಲಕ್ಷಣಗಳ ಜತೆಗೆ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಇಂಥ ರೋಗಿಗಳು ಸಾಯುವ ಅಪಾಯ ಸಾಧ್ಯತೆಯೂ ಅಧಿಕ" ಎಂದು ಬಕ್ಷಿ ಹೇಳಿದ್ದಾರೆ.

ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಜತೆಗೆ ಈ ಸಾಂಕ್ರಾಮಿಕ ದೀರ್ಘಕಾಲಿಕ ನರಸಮಸ್ಯೆಗಳನ್ನೂ ತಂದೊಟ್ಟುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News