ಮಾನವರಹಿತ ಮಿಷನ್ ಗಗನ್ ಯಾನ್ ಯೋಜನೆ ಡಿಸೆಂಬರ್ ನಲ್ಲಿ ಅಸಾಧ್ಯ: ಇಸ್ರೋ

Update: 2021-07-26 15:52 GMT

ಬೆಂಗಳೂರು, ಜು.26: ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದ ಮಾನವರಹಿತ ಮಿಷನ್ ಗಗನ್ ಯಾನ್ ಡಿಸೆಂಬರ್‍ನಲ್ಲಿ ಈಡೇರುವುದು ಅಸಾಧ್ಯ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 

ಡಿಸೆಂಬರ್ ನಲ್ಲಿ ಮಾನವರಹಿತ ಮಿಷನ್ ಗಗನ್ ಯಾನ್ ಯೋಜನೆ ಖಂಡಿತವಾಗಿಯೂ ಸಾಧ್ಯವಿಲ್ಲ. ಇನ್ನೂ ವಿಳಂಬವಾಗಲಿದೆ. ಈ ಯೋಜನೆ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಲಾಕ್‍ಡೌನ್‍ನ ಪರಿಣಾಮ ಹಾರ್ಡ್‍ವೇರ್ ಉದ್ಯಮದ ಮೇಲೆ ಉಂಟಾಗಿದ್ದು ಇಸ್ರೋ ಸಂಸ್ಥೆಗೆ ಅಗತ್ಯವಿದ್ದ ಉಪಕರಣಗಳ ಪೂರೈಕೆ ವಿಳಂಬವಾಗಿರುವುದು ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ.

ವಿನ್ಯಾಸ, ವಿಶ್ಲೇಷಣೆ ಹಾಗೂ ಡಾಕ್ಯುಮೆಂಟೇಷನ್‍ಗಳನ್ನು ಇಸ್ರೋ ಮಾಡುತ್ತಿದೆ. ಆದರೆ ಹಾರ್ಡ್‍ವೇರ್‍ನ್ನು ದೇಶಾದ್ಯಂತ ಇರುವ ಕೈಗಾರಿಕೆಗಳು ಪೂರೈಸುತ್ತಿವೆ ಎಂದು ಮೂಲಗಳು ತಿಳಿಸಿವೆ. 

ಮಾನವರಹಿತ ಮಿಷನ್ ಗಗನ್ ಯಾನ್ ಅನ್ನು ಡಿಸೆಂಬರ್ 2021ಕ್ಕೆ ಯೋಜಿಸಲಾಗಿದೆ. ಎರಡನೇ ಮಾನವರಹಿತ ಬಾಹ್ಯಾಕಾಶ ಯೋಜನೆ 2022-23ಕ್ಕೆ ಚಾಲನೆ ಪಡೆದುಕೊಳ್ಳಲಿದೆ ಎಂದು ಬಾಹ್ಯಾಕಾಶ ರಾಜ್ಯ ಖಾತೆ ಕೇಂದ್ರ ಸಚಿವ (ಸ್ವತಂತ್ರ ನಿರ್ವಹಣೆ) ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News