ಅಖಿಲೇಶ್ ಯಾದವ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ದ್ವೇಷ ಸಂದೇಶ ಪ್ರಚಾರ

Update: 2021-07-27 15:23 GMT

   ಲಕ್ನೋ,ಜು.27: ಪಕ್ಷಾಧ್ಯಕ್ಷ ಅಖಿಲೇಶ್ ಯಾದವ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ಸೃಷ್ಟಿಸಿ, ದ್ವೇಷದ ಸಂದೇಶಗಳನ್ನು ಹರಡುತ್ತಿದ್ದಾರೆಂಬ ಆರೋಪಿಸಿ ಸಮಾಜ ವಾದಿ ಪಕ್ಷವು ಅಜ್ಞಾತ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದೆ.

‘‘ಅಧಿಕಾರದಲ್ಲಿರುವವರ ಕೃಪಾಶ್ರಯದೊಂದಿಗೆ ಅಖಿ ಲೇಶ್ ಯಾದವ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ದ್ವೇಷ ಹರಡುತ್ತಿರುವ ಅಜ್ಞಾತ ವ್ಯಕ್ತಿಗಳ ವಿರುದ್ಧ ಪಕ್ಷದ ಉ.ಪ್ರ.ಘಟಕದ ಅಧ್ಯಕ್ಷ ನರೇಶ್ ಉತ್ತಮ್ ಅವರು ದೂರು ನೀಡಿದ್ದಾರೆ’’ ಎಂದು ಸಮಾಜವಾದಿ ಪಕ್ಷವು ಟ್ವೀಟ್ ಮಾಡಿದೆ.
    
ದೂರಿನ ಹಿನ್ನೆಲೆಯಲ್ಲಿ ಗೌತಮ್ಪಲ್ಲಿ ಠಾಣೆ ಪೊಲೀಸರು ರವಿವಾರ ಸಂಜೆ ಎಫ್ಐಆರ್ ದಾಖಲಿಸಿದ್ದಾರೆಂದು ಅದು ಹೇಳಿದೆ. ನಕಲಿ ಟ್ವಿಟರ್ ಮೂಲಕ ಪ್ರಕಟಿಸಲಾದ ದ್ವೇಷಯುತ ಸಂದೇಶಗಳ ಸ್ಕ್ರೀನ್ ಶಾಟ್ ಅನ್ನು ಕೂಡಾ ಉತ್ತಮ್ ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಮದೇಗುಲ ನಿರ್ಮಾಣ ವಾಗುತ್ತಿರುವ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂಬ ಪ್ರಚೋದನಕಾರಿ ಸಂದೇ ವನ್ನು ನಕಲಿ ಟ್ವಿಟರ್ ನಲ್ಲಿ ಪ್ರಕಟಿಸಲಾಗಿತ್ತು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News