ಮೆರಿಟ್ ಆಧಾರಿತ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2021-07-27 18:32 GMT

ಕೊಣಾಜೆ: ಯೇನೆಪೊಯ ಫೌಂಡೇಶನ್ (ಯೇನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನಲ್ ಮತ್ತು ಚಾರಿಟೇಬಲ್  ಟ್ರಸ್ಟ್ ನ ಘಟಕ) ಹಾಗೂ ಯೇನೆಪೋಯ (ಪರಿಗಣಿಸಲ್ಪಟ್ಟ  ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ 2021-22 ರ  ಶೈಕ್ಷಣಿಕ ವರ್ಷಕ್ಕೆ  ಈ ಕೆಳಗಿನ ಕೋರ್ಸ್‍ಗಳಿಗೆ ಸಮಾಜದಲ್ಲಿ ಆರ್ಥಿಕವಾಗಿ  ಹಿಂದುಳಿದ ಪ್ರತಿಭಾವಂತ  ವಿದ್ಯಾರ್ಥಿಗಳಿಂದ ಮೆರಿಟ್ ಆಧಾರಿತ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿ.ಡಿ.ಎಸ್, ಬಿ.ಎಸ್ಸಿ. ನರ್ಸಿಂಗ್, ಬಿ.ಪಿ,ಟಿ, ಬಿ.ಫಾರ್ಮ / ಡಿ. ಫಾರ್ಮ,  ಬಿ. ಎ.ಎಮ್.ಎಸ್, ಬಿ. ಎಚ್.ಎಮ್.ಎಸ್ ಬಿ. ಎನ್.ವೈ.ಎಸ್, ಬಿ. ಕಾಮ್/ ಬಿ.ಬಿ.ಎ./ಬಿ.ಸಿ.ಎ,  ಬಿ. ಎಚ್. ಎ., ಬಿ. ಪಿ. ಎಚ್, ಬಿ.ಎಸ್ಸಿ. -  ಪ್ಯಾರ ಮೆಡಿಕಲ್ ಕೋರ್ಸ್‍ಗಳು, ಬಿ.ಎಸ್ಸಿ. ಹೊಸ್ಪಿಟಾಲಿಟಿ ಸಯನ್ಸ್ , ಬಿ.ಎಸ್ಸಿ. ಕ್ಲಿನಿಕಲ್ ಸೈಕಾಲಜಿ,  ಬಿ.ಎಸ್ಸಿ. ಫೋರೆನ್ಸಿಕ್ ಸಯನ್ಸ್ , ಬಿ.ಎಸ್ಸಿ. ಮೈಕ್ರೋಬಯೊಲೊಜಿ , ಸ್ನಾತಕೋತ್ತರ ಪದವಿ ಕೋರ್ಸ್‍ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

ಕರ್ನಾಟಕದ  ದ.ಕ. ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಿದಂತ ಗ್ರೇಡ್ 10,  ಗ್ರೇಡ್ 11 ಮತ್ತು ಗ್ರೇಡ್ 12 ರಲ್ಲಿ 80% ಮತ್ತು ಅದಕ್ಕಿಂತ  ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಸ್ಲಿಂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ scholarship.yenepoya.in ನೋಂದಾಯಿಸಿಕೂಳ್ಳುವ ಮೂಲಕ ಅರ್ಜಿ ಸಲ್ಲಿಸಬಹುದು. yenepoya.edu.in. ನಲ್ಲಿ ಲಭ್ಯವಿರುವ ಕೋರ್ಸ್‍ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ನಿಂದ ಪಡೆಯಬಹುದಾಗಿದೆ. ಅರ್ಜಿಗಳನ್ನು ದಿನಾಂಕ 30.8.2021 ರ ಮೊದಲು ಸಲ್ಲಿಸಬೇಕಾಗಿ ಕೋರಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಡ್ಮಿಶನ್ ವಿಭಾಗವನ್ನು ಸಂಪರ್ಕಿಸಬಹುದಾಗಿದೆ (-0824- 2204676,  968669605 ) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News