ಬೆಂಗಳೂರು: ನಿವೃತ್ತ ಸಂಚಾರ ನಿಯಂತ್ರಕರ ಬೀಳ್ಕೊಡುಗೆ

Update: 2021-07-29 13:58 GMT

ಬೆಂಗಳೂರು, ಜು.29: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ(ಬಿಎಂಟಿಸಿ) ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಬ್ಬರು ಸಂಚಾರ ನಿಯಂತ್ರಕರು ಹಾಗೂ ಎಟಿಐಯೊಬ್ಬರನ್ನು ಸನ್ಮಾನಿಸಿ, ಬೀಳ್ಕೊಟ್ಟರು.

ನಗರದ ಕೆಂಪೇಗೌಡ ಬಸ್ ನಿಲ್ದಾಣದ(ಮೆಜೆಸ್ಟಿಕ್) ಬಿಎಂಟಿಸಿ ಸಿಬ್ಬಂದಿಯ ಕಚೇರಿಯಲ್ಲಿ ನಿವೃತ್ತಿ ಹೊಂದಿದ ಸಂಚಾರ ನಿಯಂತ್ರಕರಾದ ಆರ್.ಮುಹಮ್ಮದ್ ರಫೀ, ಕೆ.ಲಕ್ಷ್ಮೀಶ, ಎನ್.ರುದ್ರಪ್ಪ(ಎಟಿಐ) ಅವರನ್ನು ಸಂಸ್ಥೆಯ ಎಟಿಎಂ ಆದ ಕೃಷ್ಣಮೂರ್ತಿ ಅವರು ಸನ್ಮಾನಿಸಿ, ಗೌರವಿಸಿದರು. 

ಬಳಿಕ ಕೃಷ್ಣಮೂರ್ತಿ ಮಾತನಾಡಿ, ವರ್ಗಾವಣೆ, ಸಂಚಾರ ನಿಯಂತ್ರಕರಾದ ಆರ್.ಮುಹಮ್ಮದ್ ರಫೀ ಅವರು 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ, ಕೆ.ಲಕ್ಷ್ಮೀಶ ಅವರು 38 ವರ್ಷ ಹಾಗೂ ಎನ್.ರುದ್ರಪ್ಪ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಎಲ್ಲ ಅಧಿಕಾರಿಗಳ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. 

ಅಲ್ಲದೆ, ನಿವೃತ್ತಿ ಎನ್ನುವುದು ಸರಕಾರಿ ಸಂಸ್ಥೆಗಳಲ್ಲಿ ಸಹಜ. ಹಲವು ವರ್ಷಗಳ ಕಾಲ ನಿರ್ವಾಹಕರಾಗಿ ಸೇವೆ ಸಲ್ಲಿಸಿದ ಬಳಿಕ ಭಡ್ತಿ ಪಡೆದು ಸಂಸ್ಥೆಯಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಮಾಡಲು ಅವಕಾಶ ದೊರೆಯುವುದು ಸಹ ಸಂತಸಕರ ವಿಷಯ ಎಂದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಲೆಕ್ಕ ಪತ್ರಾಧಿಕಾರಿ ಜೆ.ಎಂ.ಮಂಜುನಾಥ್, ಎಟಿಐಗಳಾದ ಅಬ್ದುಲ್ ರಝಾಕ್, ಮುನಿತಿಮ್ಮಯ್ಯ ಸೇರಿದಂತೆ ಬಿಎಂಟಿಸಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News