ಚರ್ಚೆ ಬಳಿಕವೇ ಜಾಹೀರಾತು ಪ್ರದರ್ಶನಕ್ಕೆ ಅವಕಾಶ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Update: 2021-07-29 15:28 GMT

ಬೆಂಗಳೂರು, ಜು.29: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಜಾಹೀರಾತು ಪ್ರದರ್ಶನಕ್ಕೆ ರಾಜ್ಯ ಸರಕಾರ ಒಪ್ಪಿಗೆ ಆದೇಶ ಸಂಬಂಧ ಚರ್ಚೆ ನಡೆಸಿದ ಬಳಿಕವೇ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. 

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ತಿಂಗಳ ಹಿಂದೆಯೇ ಪಾಲಿಕೆಯೂ ಜಾಹೀರಾತು ಸಂಬಂಧ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಅನುಮೋದನೆ ದೊರೆತಿದೆ. ಆದರೆ, ಯಾವ ಅಂಶಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಆಯ್ದ ಕೆಲವು ನಿಬರ್ಂಧಿತ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಕಡೆ ಜಾಹೀರಾತು ಪ್ರದರ್ಶನ ಮಾಡಬಹುದು ಎಂದು ಸರಕಾರ ಅನುಮೋದನೆಯಲ್ಲಿ ತಿಳಿಸಿದೆ. ಜತೆಗೆ, ಜಾಹೀರಾತು ಪ್ರದರ್ಶಿಸುವವರು ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅವರ ಅನುಮತಿ ಪಡೆದ ನಂತರ ಖಾಸಗಿ ನಿವೇಶನ, ಕಟ್ಟಡ, ಮೇಲ್ಸೇತುವೆ, ಕೇಂದ್ರ-ರಾಜ್ಯ ಸರಕಾರಿ ಕಟ್ಟಡಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಬಹುದಾಗಿದೆ.

ಜತೆಗೆ, ಮೂರು ವರ್ಷಗಳಿಗೊಮ್ಮೆ ಪರವಾನಿಗೆ ನವೀಕರಣ ಮಾಡಿಕೊಳ್ಳುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಇವೆಲ್ಲವೂ ಜನರ ಒಪ್ಪಿಗೆ ಆದ ಮೇಲೆಯೂ ಜಾರಿಗೆ ನಾವು ಚಿಂತನೆ ನಡೆಸಿದ್ದು, ಈ ಬಗೆಗಿನ ತೀರ್ಮಾನವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ವಿಸಿದರು.

ಇನ್ನು, ಬೆಂಗಳೂರಿನ ಅಂದಕ್ಕೆ ಈ ಜಾಹೀರಾತು ಫಲಕಗಳನ್ನು ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದ ಅವರು, ಜಾಹೀರಾತು ಫಲಕ ಮಾಲಕರಲ್ಲೂ ಕೆಲವರು ನಕಲಿಗಳಿದ್ದು, ಈ ಸಂಬಂಧ ಪರಿಶೀಲನೆ ನಡೆಸಲಾಗುವುದು. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಜನರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News