ಒಲಿಂಪಿಕ್ಸ್ ನಲ್ಲಿ ಕೊನೆಗೂ ಗೆಲುವಿನ ಮುಖ ಕಂಡ ಭಾರತದ ಮಹಿಳಾ ಹಾಕಿ ತಂಡ

Update: 2021-07-30 06:43 GMT
photo: twitter/@IndiaSportsHub

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕೊನೆಗೂ ಗೆಲುವಿನ ಮುಖ  ಕಂಡಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಸುತ್ತಿಗೇರುವ  ಕನಸು ಜೀವಂತವಾಗಿರಿಸಿಕೊಂಡಿದೆ.

ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು.

ನವನೀತ್ ಕೌರ್ ಕೊನೆಯ ಕ್ಷಣದಲ್ಲಿ(57ನೇ ನಿಮಿಷ) ತಂಡದ ಪರ ಏಕೈಕ ಗೋಲು ಗಳಿಸಿ ರೋಚಕ ಗೆಲುವು ತಂದುಕೊಟ್ಟರು.

'ಎ' ಗುಂಪಿನಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News