ಬೆಂಗಳೂರು: ಸರಕಾರಿ ನೌಕರಿ ಹೆಸರಿನಲ್ಲಿ ವಂಚನೆ; ಓರ್ವನ ಬಂಧನ

Update: 2021-07-30 17:37 GMT

ಬೆಂಗಳೂರು, ಜು.30: ಅಬಕಾರಿ, ಉಪನ್ಯಾಸಕರ ಹುದ್ದೆ ಸೇರಿದಂತೆ ಇನ್ನಿತರೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ವಂಚನೆ ಆರೋಪ ಸಂಬಂಧ ಇಲ್ಲಿನ ವಿಧಾನಸೌಧ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ಅರುಣ್ ಕುಮಾರ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಸರಕಾರಿ ಉದ್ಯೋಗ ಕೊಡಿಸುವುದಾಗಿ ಆರೋಪಿಯು ಕೋಟ್ಯಂತರ ರೂ. ವಂಚನೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಈತ ಕೆಪಿಎಸ್ಸಿ ಸದಸ್ಯ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವುದಾಗಿ ಆರೋಪಿಯು ಮನೆ ಬಾಗಿಲಿಗೆ ನೇಮಕಾತಿ ಪತ್ರ ಬರುವಂತೆ ಮಾಡುವುದಾಗಿ ನಂಬಿಸಿ ವಂಚನೆ ನಡೆಸುತ್ತಿದ್ದನು ಎಂದು ಹೇಳಲಾಗುತ್ತಿದೆ.

ಸರಕಾರಿ ಉದ್ಯೋಗದ ಆಸೆ ಇಟ್ಟುಕೊಂಡಿದ್ದ ಯುವಕರನ್ನು ಮೊದಲು ಪರಿಚಯ ಮಾಡಿಕೊಂಡು ನಂತರ ನನಗೆ ಎಲ್ಲ ರೀತಿಯ ಪರಿಚಯ ಇದೆ. ಅಬಕಾರಿ ಇಲಾಖೆಯ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿ, ಹುದ್ದೆ ಕೊಡಿಸಲು 70 ಲಕ್ಷ ಖರ್ಚಾಗಲಿದೆ ಎಂದು ಮುಂಚೆಯೇ ಆಕಾಂಕ್ಷಿಗಳಿಗೆ ತಿಳಿಸುತ್ತಿದ್ದ.

ತದನಂತರ, ಮುಂಗಡ ಹಣವಾಗಿ 35 ಲಕ್ಷ ಖರ್ಚಾಗುತ್ತದೆ ಎಂದು ಆಕಾಂಕ್ಷಿಗಳಿಗೆ ತಿಳಿಸಿ, ಹಣ ವಸೂಲಿ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News