ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ

Update: 2021-07-31 12:57 GMT

ಕೋಲ್ಕತ್ತಾ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಈ ನಿರ್ಧಾರವು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡ ಕಾರಣ ಮತ್ತು ರಾಜ್ಯ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿದೆ ಎಂಬ ಸುಳಿವನ್ನೂ ಅವರು ನೀಡಿದ್ದಾರೆ.

2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಎಂಒಎಸ್ ಆಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋ ಅವರನ್ನು ಈ ತಿಂಗಳ ಆರಂಭದಲ್ಲಿ ಪ್ರಮುಖ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ಕೈಬಿಡಲಾಗಿತ್ತು.

"ಅಲ್ವಿದಾ, ನಾನು ನನ್ನ ಹೆತ್ತವರು, ಪತ್ನಿ, ಸ್ನೇಹಿತರ ಸಲಹೆಗಳನ್ನು ಕೇಳಿದ ಬಳಿಕ ನಾನು ತ್ಯಜಿಸಲು ನಿರ್ಧರಿಸಿದ್ದೇನೆ. ನಾನು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಟಿಎಂಸಿ, ಕಾಂಗ್ರೆಸ್‌, ಸಿಪಿಎಂ, ಎಲ್ಲಿಗೂ. ನನ್ನನ್ನು ಯಾರೂ ಆಹ್ವಾನಿಸಿಲ್ಲ ಎಂಬುವುದನ್ನೂ ನಾನು ದೃಢಪಡಿಸುತ್ತಿದ್ದೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

"ನಾನು ತುಂಬಾ ಸಮಯ ಉಳಿದಿದ್ದೇನೆ, ನಾನು ಕೆಲವರಿಗೆ ಸಹಾಯ ಮಾಡಿದ್ದೇನೆ. ನಾನು ಕೆಲವರಿಗೆ ನೋವು ನೀಡಿದ್ದೇನೆ. ಸಮಾಜ ಸೇವೆ ಮಾಡಬೇಕಾದರೆ ರಾಜಕೀಯಕ್ಕೆ ಸೇರದೆಯೂ ಮಾಡಬಹುದಾಗಿದೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News