ವರ್ಗಾವಣೆ ಗೊಂದಲಗಳಿಗೆ ಮಾಸ್ಟರ್ ಫೈಲ್ ಪರಿಹಾರವಾಗಲಿದೆ: ವಿ.ಅನ್ಬುಕುಮಾರ್

Update: 2021-07-31 17:51 GMT

ಬೆಂಗಳೂರು, ಜು.31: ಶಿಕ್ಷಕರ ವರ್ಗಾವಣೆಯನ್ನು ವೇಳಾಪಟ್ಟಿಯಂತೆ ನಡೆಸಲು ಅಗತ್ಯ ಸಿದ್ಧತೆ, ನ್ಯಾಯಾಲಯದ ವಿಚಾರ, ಹೆಚ್ಚುವರಿ ವರ್ಗಾವಣೆ, ಕಡ್ಡಾಯ ವರ್ಗಾವಣೆ ಸೇರಿದಂತೆ ಎಲ್ಲ ವಿಷಯಗಳನ್ನು ಹೊಂದಿರುವ ಒಂದು ಮಾಸ್ಟರ್ ಫೈಲ್ ಅನ್ನು ಪ್ರತಿಯೊಬ್ಬರೂ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಜಿಲ್ಲಾ ಉಪ ನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವರ್ಗಾವಣೆ ಜಿಲ್ಲಾ ನೋಡಲ್ ಅಧಿಕಾರಿಗಳೊಂದಿಗೆ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಸೂಚನೆ ನೀಡಿದರು.

ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯಂತೆ ಕಾಲಕಾಲಕ್ಕೆ ಮಾಹಿತಿಯನ್ನು ಪ್ರಕಟಿಸಬೇಕು. ವರ್ಗಾವಣೆ ವಿಚಾರವಾಗಿ ಅಧಿಸೂಚನೆ ಹೊರಡಿಸಿದ ದಿನದಿಂದ ವೇಳಾಪಟ್ಟಿ ಹೊರಡಿಸುವವರೆಗೂ ನಡೆದಿರುವ ಎಲ್ಲ ಪ್ರಕ್ರಿಯೆಗಳ ಬಗ್ಗೆ ಮಾಸ್ಟರ್ ಫೈಲ್‍ನಲ್ಲಿ ಮಾಹಿತಿ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ವರ್ಗಾವಣೆ ಬಗ್ಗೆ ಯಾವುದೆ ಗೊಂದಲ ಎದುರಾದರೂ ಅದನ್ನು ತಕ್ಷಣ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಉಪನಿರ್ದೇಶಕರು, ಜಂಟಿ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವರ್ಗಾವಣೆ ಕುರಿತು ಶಿಕ್ಷಕರಲ್ಲಿ ಯಾವುದೆ ಬಗೆಯ ಗೊಂದಲಗಳು ಅಥವಾ ಸಮಸ್ಯೆಗಳು ಎದುರಾದರೆ ಅದನ್ನು ನಿವಾರಿಸಲು ಸಹಾಯವಾಣಿ ತೆರೆಯಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News