ಕೋವಿಡ್ ಪ್ರಕರಣ ಹೆಚ್ಚಳ: ಬೆಂಗಳೂರಿನಲ್ಲಿ 138 ಮೈಕ್ರೋ ಕಂಟೈನ್ಮೆಂಟ್ ಝೋನ್!

Update: 2021-08-03 12:06 GMT

ಬೆಂಗಳೂರು, ಆ.3: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೋವಿಡ್ ಮೂರನೆ ಅಲೆ ಭೀತಿಯ ಮುನ್ನವೇ ಕೋವಿಡ್ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದರ ನಡುವೆ ಬಿಬಿಎಂಪಿಯೂ ಈಗಾಗಲೇ ಸಕ್ರಿಯವಾಗಿರುವ 138 ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನು ಪತ್ತೆ ಮಾಡಿರುವುದು ಆತಂಕಕ್ಕೆ ಎಡೆಮಾಡಿದೆ.

ನಗರದಲ್ಲಿ ಕಳೆದ ತಿಂಗಳಿನಲ್ಲಿ ತೀರ ಕಡಿಮೆಯಾಗಿದ್ದ ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳು, ಇದೀಗ ಮತ್ತೆ ಹೆಚ್ಚಾಗಿವೆ. ಒಟ್ಟು 751 ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 138 ಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸಕ್ರಿಯವಾಗಿವೆ.

ಅತಿ ಹೆಚ್ಚು ಎಂದರೆ, ಮಹದೇವಪುರದಲ್ಲಿಯೇ ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳಿವೆ. ಇಲ್ಲಿ ಒಟ್ಟು 162 ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿದ್ದು, 42 ಪ್ರದೇಶಗಳು ಅತೀ ಸೂಕ್ಷ್ಮವಾಗಿವೆ. ಉಳಿದಂತೆ ಪೂರ್ವ ವಲಯದಲ್ಲೂ 31 ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳಿವೆ. ಬೊಮ್ಮನಹಳ್ಳಿ 26, ದಕ್ಷಿಣ ವಲಯ 13, ಯಲಹಂಕ 11,ಆರ್ ಆರ್ ನಗರ 7, ಪಶ್ಚಿಮ 4 ಹಾಗೂ ದಾಸರಹಳ್ಳಿ ವ್ಯಾಪ್ತಿಯಲ್ಲಿ 2 ಮಾತ್ರ ಮೈಕ್ರೋ ಕಂಟೈನ್ಮೆಂಟ್ ಝೋನ್‍ಗಳಿವೆ ಎಂದು ಬಿಬಿಎಂಪಿ ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News