ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗಾಗಿ ಅರ್ಜಿ ಆಹ್ವಾನ

Update: 2021-08-03 17:31 GMT

ಮಂಗಳೂರು, ಆ.3: ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಿಗೆ ಯಾವುದೇ ವೇತನ ಪಾವತಿಸುವುದಿಲ್ಲ. ಆದರೆ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾತಿ ನಂತರ ಮಂಜೂರಾದ ಸಾಲವನ್ನು ಆಧರಿಸಿ 20 ಸಾವಿರ ರೂ.ಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುತ್ತದೆ.

ಈ ಪೈಕಿ ಶೇ.50 ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.50 ಹಣವನ್ನು ಘಟಕಗಳು, ಜಿಎಸ್‌ಟಿ ಮತ್ತು ಉದ್ಯೋಗ ಆಧಾರ್ ನೋಂದಣಿಗಳನ್ನು ಮಾಡಬೇಕು. ಎಫ್‌ಎಸ್‌ಎಸ್‌ಎಐನಿಂದ ಪ್ರಮಾಣಿತ ಅನುಸರಣೆಯನ್ನು ಪಡೆದ ನಂತರ ಈ ಹಣ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆ.7 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2423604 ಅಥವಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News