ಒಲಿಂಪಿಕ್ಸ್‌: ಭಾರತದ ಕುಸ್ತಿಪಟುಗಳಾದ ರವಿ, ದೀಪಕ್ ಸೆಮಿ ಫೈನಲ್ ಗೆ

Update: 2021-08-04 05:55 GMT
ರವಿ ದಹಿಯಾ, ದೀಪಕ್ ಪುನಿಯಾ (Photo source: Twitter/@mygovindia)

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇಬ್ಬರು ಭಾರತೀಯ ಕುಸ್ತಿಪಟುಗಳಾದ ರವಿ ದಹಿಯಾ ಹಾಗೂ ದೀಪಕ್ ಪುನಿಯಾ ಅವರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪುರುಷರ ಫ್ರಿಸ್ಟೈಲ್ ನ 57 ಕೆಜಿ  ವಿಭಾಗದ ಮೊದಲೆರಡು ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ 23 ವರ್ಷದ ರವಿ ದಹಿಯಾ ತಾಂತ್ರಿಕ ಶ್ರೇಷ್ಠತೆಯ ಮೇಲೆ ತಮ್ಮ ಎರಡೂ ಸ್ಪರ್ಧೆಗಳನ್ನು ಗೆದ್ದರು. ನಾಲ್ಕನೇ ಶ್ರೇಯಾಂಕದ ದಹಿಯಾ ತನ್ನ ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾದ ಟಿಗ್ರೆರೋಸ್ ಅರ್ಬಾನೊ (13-2) ಅವರನ್ನು ಸೋಲಿಸಿದರು. ರವಿ  ಕ್ವಾರ್ಟರ್ ಫೈನಲ್ ನಲ್ಲಿ ಬಲ್ಗೇರಿಯದ ಜಾರ್ಜಿವಲೆನ್ ಟಿನೊವ್ ಅವರನ್ನು 14-4 ಅಂತರದಿಂದ ಮಣಿಸಿ ಸೆಮಿ ಫೈನಲ್ ತಲುಪಿದರು.

ರವಿ ಇಂದು ಮಧ್ಯಾಹ್ನ 2:45ಕ್ಕೆ ಸೆಮಿ ಫೈನಲ್ ನಲ್ಲಿ ಕಝಕ್ ಸ್ತಾನದ ನುರಿಸ್ಲಾಮ್ ಸನಾಯೆವ್  ಅವರನ್ನು ಎದುರಿಸಲಿದ್ದಾರೆ.

 ದೀಪಕ್ ಅವರು ಪುರುಷರ ಫ್ರೀಸ್ಟ್ರೈಲ್ 86 ಕೆಜಿ ವಿಭಾಗದ  ಪ್ರಿ-ಕ್ವಾರ್ಟರ್ ನಲ್ಲಿ  ನೈಜೀರಿಯಾದ ಎಕೆರೆಕೆಮೆ ಅಗಿಯೊಮೋರ್ ಅವರನ್ನು ತಾಂತ್ರಿಕ ಶ್ರೇಷ್ಠತೆಯಿಂದ ಸೋಲಿಸಿದರು.  ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಝುಶೆನ್ ಲಿನ್ ವಿರುದ್ಧ 6-3 ರಿಂದ ಜಯ ಸಾಧಿಸಿದರು.

ದೀಪಕ್ ಸೆಮಿ ಫೈನಲ್ ನಲ್ಲಿ  2018 ರ ವಿಶ್ವ ಚಾಂಪಿಯನ್ ಅಮೆರಿಕದ ಡೇವಿಡ್ ಮೋರಿಸ್ ಟೇಲರ್ ವಿರುದ್ಧ ಸೆಣಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News