ಕಂಚು ಗೆದ್ದುಇತಿಹಾಸ ಬರೆದ ಭಾರತದ ಹಾಕಿ ತಂಡಕ್ಕೆ ಪ್ರಧಾನಿ ಮೋದಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅಭಿನಂದನೆ

Update: 2021-08-05 09:29 GMT

ಹೊಸದಿಲ್ಲಿ: ಟೋಕಿಯೊ ಕ್ರೀಡಾಕೂಟದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿದ ನಂತರ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಪುರುಷರ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ  ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು ಬೆಳಿಗ್ಗೆ ಅಭಿನಂದಿಸಿದರು.

"ನಮ್ಮ ಹಾಕಿ ತಂಡಕ್ಕೆ ಅಭಿನಂದನೆಗಳು ... ಒಡಿಶಾದಂತೆ ಇಡೀ ಭಾರತವು ತುಂಬಾ ಉತ್ಸುಕವಾಗಿದೆ. ನಾವೆಲ್ಲರೂ ನಿಮ್ಮ ಹಿಂದೆ ಇದ್ದೇವೆ ಹಾಗೂ  ನಿಮಗೆ ಶುಭ ಹಾರೈಸುತ್ತೇವೆ" ಎಂದು ಪಟ್ನಾಯಕ್ ಭಾರತ ಹಾಕಿ ತಂಡದ ಸದಸ್ಯರೊಂದಿಗೆ ಸಂಕ್ಷಿಪ್ತ ವೀಡಿಯೊ ಸಂವಾದದಲ್ಲಿ ಹೇಳಿದರು.

ಇಂದು ಬೆಳಗ್ಗೆ  ಪ್ರಧಾನಿ ಮೋದಿ ಅವರು ಪುರುಷರ ಹಾಕಿ ತಂಡದೊಂದಿಗೆ ಮಾತನಾಡುತ್ತಾ ಅವರ ಪರಿಣಾಮಕಾರಿ ಪ್ರದರ್ಶನವನ್ನು ಅಭಿನಂದಿಸಿದರು.

 ಪ್ರಧಾನ ಮಂತ್ರಿ ಅವರು ನಾಯಕ ಮನ್ ಪ್ರೀತ್ ಸಿಂಗ್ ಹಾಗೂ  ಮುಖ್ಯ ಕೋಚ್ ಗ್ರಹಾಂ ರೀಡ್ ಅವರೊಂದಿಗೆ ಮಾತನಾಡಿದರು. ಇತಿಹಾಸವನ್ನು ನಿರ್ಮಿಸಿದ್ದಕ್ಕೆ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ತಿಳಿಸಿದರು.

ಪುರುಷರ ಹಾಕಿ ತಂಡವು ಜರ್ಮನಿ ತಂಡವನ್ನು ಸೋಲಿಸಿದ ನಂತರ ನಾಲ್ಕು ದಶಕಗಳಲ್ಲಿ ಮೊದಲ ಒಲಿಂಪಿಕ್ ಹಾಕಿ ಪದಕವನ್ನು ಗೆದ್ದುಕೊಂಡಿತು. ಭಾರತವು ಕೊನೆಯ ಬಾರಿಗೆ ಒಲಿಂಪಿಕ್ ಹಾಕಿ ಪದಕ ಗೆದ್ದದ್ದು 1980 ರ ಮಾಸ್ಕೋ ಕ್ರೀಡಾಕೂಟದಲ್ಲಿ, ಆಗ  ಸ್ಪೇನ್ ಅನ್ನು 4-3 ಅಂತರದಲ್ಲಿ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News