ಬೆಂಗಳೂರು: ಯುವಕನಲ್ಲಿ ಡೆಲ್ಟಾ ಪ್ಲಸ್ ಪತ್ತೆ
Update: 2021-08-06 21:27 IST
ಬೆಂಗಳೂರು, ಆ.6: ಬೆಂಗಳೂರಲ್ಲಿ 29 ವರ್ಷದ ಯುವಕನಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಈತನಿಗೆ ಜು.14 ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಜ್ವರದ ಲಕ್ಷಣಗಳು ಕೂಡ ಕಾಣಿಸಿಕೊಂಡಿದ್ದವು. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಮಾಡಿ ಟೆಸ್ಟ್‍ಗೆ ಒಳಪಡಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಡೆಲ್ಟಾ ಪ್ಲಸ್ ಸೋಂಕಿತ ಸದ್ಯ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಟೆಸ್ಟ್ ಕೊಡುವಾಗ ಸೋಂಕಿತ ಉತ್ತರಹಳ್ಳಿ ಎಂದು ಅಡ್ರೆಸ್ ಕೊಟ್ಟಿದ್ದ, ಡೆಲ್ಟಾ ಪ್ಲಸ್ ವೈರಸ್ ಸೋಂಕು ತಗುಲಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಇದೀಗ ನಾಪತ್ತೆಯಾಗಿದ್ದಾನೆ. ಸೋಂಕಿತನ ಪತ್ತೆಗಾಗಿ ಪೊಲೀಸರ ಸಹಕಾರ ಕೇಳಿದ್ದಾರೆ. ಆತನ ಮೊಬೈಲ್ ನಂಬರ್ ಆಧರಿಸಿ ಪೆÇಲೀಸರು ಟ್ರೇಸ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.