ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಐಸಿಸಿ ಒತ್ತಾಯ

Update: 2021-08-10 08:24 GMT

ದುಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ದೃಢಪಡಿಸಿದೆ.

ಐಸಿಸಿ ಕೆಲವು ಸಮಯದಿಂದ ಕ್ರಿಕೆಟ್ ಸೇರ್ಪಡೆಗಾಗಿ ವಾದಿಸುತ್ತಿದೆ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಬೋರ್ಡ್ ಬಿಸಿಸಿಐ ಬಿಡ್ ಗೆ ಬೆಂಬಲವನ್ನು ನೀಡಲಿದೆ ಎಂದು ಕಾರ್ಯದರ್ಶಿ ಜಯ ಶಾ ಸ್ಪಷ್ಟಪಡಿಸಿದ್ದರು.

ಒಲಿಂಪಿಕ್ಸ್ ವರ್ಕಿಂಗ್ ಗ್ರೂಪ್ ಅನ್ನುಕೂಡ  ರಚಿಸಿರುವ ಐಸಿಸಿ, ಇದು 2028 ರಿಂದ ಆರಂಭವಾಗುವ ಒಲಿಂಪಿಕ್ಸ್‌ನ ಭಾಗವಾಗಿಸುವ ಕೆಲಸ ಮಾಡುತ್ತದೆ.

"ಈ ಬಿಡ್‌ನ ಮೂಲಕ ನಮ್ಮ ಕ್ರೀಡೆ ಒಗ್ಗಟ್ಟಾಗಿದೆ, ಮತ್ತು ನಾವು ಒಲಿಂಪಿಕ್ಸ್ ಅನ್ನು ಕ್ರಿಕೆಟ್ ನ ದೀರ್ಘಾವಧಿಯ ಭವಿಷ್ಯದ ಭಾಗವಾಗಿ ನೋಡುತ್ತೇವೆ. ನಾವು ಜಾಗತಿಕವಾಗಿ ಬಿಲಿಯನ್ ಗೂ ಅಧಿಕ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ಅವರಲ್ಲಿ 90 ಪ್ರತಿಶತದಷ್ಟು ಜನರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಾರೆ" ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್‌ಕ್ಲೇ ಹೇಳಿಕೆಯೊಂದರಲ್ಲಿ ತಿಳಿಸಿದರು. ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News