ಒಲಿಂಪಿಕ್ಸ್: ಭಾರತದ ಪದಕ ವಿಜೇತರಿಗೆ ಘೋಷಿಸಲಾದ ನಗದು ಬಹುಮಾನಗಳ ಸಂಪೂರ್ಣ ಪಟ್ಟಿ

Update: 2021-08-10 13:58 GMT

 ಹೊಸದಿಲ್ಲಿ: ಭಾರತದ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಿಗೆ ನಗದು ಬಹುಮಾನ ಹಾಗೂ  ಭಡ್ತಿಗಳ ಸುರಿಮಳೆಯಾಗಿದೆ. ಭಾರತವು ಟೋಕಿಯೊ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದೆ.

ಇದರೊಂದಿಗೆ 2012ರಲ್ಲಿನ ಲಂಡನ್ ಒಲಿಂಪಿಕ್ಸ್ ನಲ್ಲಿನ ತಾನು ತೋರಿದ್ದ ಸಾಧನೆ ಯನ್ನು (6 ಪದಕಗಳು)ಮೀರಿ ನಿಂತಿದೆ.

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊದಲ್ಲಿ ಭಾರತದ ಮೊದಲ ಟ್ರ್ಯಾಕ್ ಆ್ಯಂಡ್  ಫೀಲ್ಡ್ ಒಲಿಂಪಿಕ್ಸ್  ಚಿನ್ನದ ಪದಕ ಗೆದ್ದರೆ, ಪಿ.ವಿ. ಸಿಂಧು ಬ್ಯಾಡ್ಮಿಂಟನ್ ನಲ್ಲಿ ಕಂಚು ಗೆದ್ದರು. ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಪುರುಷರ ಹಾಕಿ ತಂಡ 41 ವರ್ಷಗಳ ಬಳಿಕ ಕಂಚು ಜಯಿಸಿತು. ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದರು ಹಾಗೂ ಕುಸ್ತಿಪಟುಗಳಾದ ರವಿ ದಹಿಯಾ  ಹಾಗೂ ಬಜರಂಗ್ ಪುನಿಯಾ ಕ್ರಮವಾಗಿ ಬೆಳ್ಳಿ ಹಾಗೂ  ಕಂಚು ಗೆದ್ದರು.

 ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರಿಗೆ ಘೋಷಿಸಲಾದ ನಗದು ಬಹುಮಾನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

ನೀರಜ್ ಚೋಪ್ರಾ (ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ)

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: 6 ಕೋಟಿ ರೂ., ಪಂಚಕುಲದ  ನೂತನ ಅತ್ಲೆಟಿಕ್ಸ್ ಕೇಂದ್ರದ ಮುಖ್ಯಸ್ಥರಾಗಿ ನೇಮಕದ ಭರವಸೆ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಂದ: 2 ಕೋಟಿ ರೂ.

ಐಒಎಯಿಂದ: 75 ಲಕ್ಷ ರೂ.

ಬಿಸಿಸಿಐನಿಂದ: 1 ಕೋಟಿ ರೂ.

ಚೆನ್ನೈ ಸೂಪರ್ ಕಿಂಗ್ಸ್: 1 ಕೋ.ರೂ.

ಇಂಡಿಗೋ ಏರ್‌ಲೈನ್ಸ್‌ನಿಂದ: 1 ವರ್ಷದವರೆಗೆ ಅನಿಯಮಿತ ಉಚಿತ ಪ್ರಯಾಣ

ಎಲಾನ್ ಗ್ರೂಪ್ ನಿಂದ (ಗುರುಗ್ರಾಮ ಮೂಲದ ರಿಯಾಲ್ಟಿ ಸಂಸ್ಥೆ): 25 ಲಕ್ಷ ರೂ.

BYJU'S ನಿಂದ: 2 ಕೋಟಿ ರೂ.

ಪಿ.ವಿ. ಸಿಂಧು (ಬ್ಯಾಡ್ಮಿಂಟನ್‌ನಲ್ಲಿ ಕಂಚು)

ಆಂಧ್ರಪ್ರದೇಶ ಸರಕಾರ: 30 ಲಕ್ಷ ರೂ.

ಬಿಸಿಸಿಐ: 25 ಲಕ್ಷ ರೂ.

ಐಒಎ: 25 ಲಕ್ಷ ರೂ.

BYJU'S ನಿಂದ: 1 ಕೋಟಿ ರೂ.

ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್‌ನಲ್ಲಿ ಕಂಚು)

ಬಿಸಿಸಿಐನಿಂದ: 25 ಲಕ್ಷ ರೂ.

ಐಒಎಯಿಂದ: 25 ಲಕ್ಷ ರೂ.

BYJU'S ನಿಂದ: 1 ಕೋಟಿ ರೂ.

ಅಸ್ಸಾಂ ಕಾಂಗ್ರೆಸ್: 3 ಲಕ್ಷ ರೂ.

ಮೀರಾಬಾಯಿ ಚಾನು (ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ)

ಅಶ್ವಿನಿ ವೈಷ್ಣವ್ ಅವರಿಂದ (ರೈಲ್ವೇ ಮಂತ್ರಿ): 2 ಕೋಟಿ ರೂ.

ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಅವರಿಂದ: 1 ಕೋಟಿ ರೂ.

 ಮೀರಾಬಾಯಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಭಡ್ತಿ: ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಘೋಷಣೆ

ಬಿಸಿಸಿಐನಿಂದ: 50 ಲಕ್ಷ ರೂ.

ಐಒಎಯಿಂದ: 40 ಲಕ್ಷ ರೂ.

BYJU'S ನಿಂದ: 1 ಕೋಟಿ ರೂ.

ಭಾರತೀಯ ಪುರುಷರ ಹಾಕಿ ತಂಡ (ಕಂಚು)

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: ಸುರೇಂದರ್ ಕುಮಾರ್ ಹಾಗೂ  ಸುಮಿತ್ ಗೆ ಸರಕಾರಿ ಉದ್ಯೋಗಗಳು ಹಾಗೂ ರಿಯಾಯಿತಿ ದರದಲ್ಲಿ ಹರ್ಯಾಣ ಶಹರಿ ವಿಕಾಸ್ ಪ್ರಾಧಿಕಾರನ್ (ಎಚ್ ಎಸ್ ವಿಪಿ)ಪ್ಲಾಟ್ ಗಳು

ಬಿಸಿಸಿಐನಿಂದ: ಪೂರ್ಣ ತಂಡಕ್ಕೆ 1.25 ಕೋಟಿ ರೂ.

BYJU'S ನಿಂದ: 1 ಕೋಟಿ ರೂ.

ಐಒಎಯಿಂದ: 25 ಲಕ್ಷ ರೂ.

ರವಿ ದಹಿಯಾ (ಕುಸ್ತಿಯಲ್ಲಿ ಬೆಳ್ಳಿ)

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: 4 ಕೋಟಿ ರೂಪಾಯಿ, ಸರಕಾರಿ ಉದ್ಯೋಗ, ರಿಯಾಯಿತಿ ದರದಲ್ಲಿ ಎಚ್ ಎಸ್ ವಿಪಿ ಪ್ಲಾಟ್

ಬಿಸಿಸಿಐನಿಂದ: 50 ಲಕ್ಷ ರೂ.

ಐಒಎಯಿಂದ: 40 ಲಕ್ಷ ರೂ.

BYJU'S ನಿಂದ: 1 ಕೋಟಿ ರೂ.

ಬಜರಂಗ್ ಪುನಿಯಾ (ಕುಸ್ತಿಯಲ್ಲಿ ಕಂಚು)

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: 2.5 ಕೋಟಿ ರೂಪಾಯಿ, ಸರಕಾರಿ ಉದ್ಯೋಗ, ರಿಯಾಯಿತಿ ದರದಲ್ಲಿ ಎಸ್ ಎಸ್ ವಿಪಿ  ಪ್ಲಾಟ್ .

ಬಿಸಿಸಿಐನಿಂದ: 25 ಲಕ್ಷ ರೂ.

ಐಒಎಯಿಂದ: 25 ಲಕ್ಷ ರೂ.

BYJU'S ನಿಂದ: 1 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News