ಪಿಎಸ್‌ಜಿ ಕ್ಲಬ್ ಜತೆ ಒಪ್ಪಂದ ಮಾಡಿಕೊಂಡ ಮೆಸ್ಸಿ

Update: 2021-08-11 11:54 GMT

photo :twitter.com/PSG_English

ಅರ್ಜೆಂಟೀನಾ : ವೃತ್ತಿಜೀವನದುದ್ದಕ್ಕೂ ಹೊಂದಿದ್ದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಜತೆಗಿನ ಸಂಬಂಧವನ್ನು ಇತ್ತೀಚೆಗೆ ಕಡಿದುಕೊಂಡಿದ್ದ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ, ಪ್ಯಾರೀಸ್ ಸೈಂಟ್-ಜಮೈನ್ (ಪಿಎಸ್‌ಜಿ) ಕ್ಲಬ್ ಜತೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರೊಂದಿಗೆ ಪಿಎಸ್‌ಜಿನಲ್ಲಿ ಹೊಸ ಯುಗಾರಂಭವಾಗಿದೆ.

"34 ವರ್ಷ ವಯಸ್ಸಿನ ಅರ್ಜೆಂಟೀನಾದ ಸ್ಟಾರ್ ಆಟಗಾರ ಎರಡು ವರ್ಷಗಳ ಅವಧಿಗೆ ನಮ್ಮ ಕ್ಲಬ್ ಪರ ಆಡುವ ಒಪ್ಪಂದಕ್ಕೆ ಸಹಿ ಮಾಡಿದ್ದು, ಮೂರನೇ ಸೀಸನ್‌ಗೆ ಇದು ಐಚ್ಛಿಕವಾಗಿರುತ್ತದೆ" ಎಂದು ಪಿಎಸ್‌ಜಿ ಪ್ರಕಟಿಸಿದೆ.

"ಪಿಎಸ್‌ಜಿನಲ್ಲಿ ನನ್ನ ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭಿಸಲು ರೋಮಾಂಚನವಾಗುತ್ತಿದೆ" ಎಂದು ಮೆಸ್ಸಿ ಹೇಳಿದ್ದಾರೆ. "ಕ್ಲಬ್‌ನ ಪ್ರತಿಯೊಂದು ಅಂಶವೂ ನನ್ನ ಫುಟ್ಬಾಲ್ ಮಹತ್ವಾಕಾಂಕ್ಷೆಗೆ ಸರಿ ಹೊಂದುತ್ತದೆ. ಈ ತಂಡ ಮತ್ತು ಕೋಚಿಂಗ್ ಸಿಬ್ಬಂದಿ ಎಷ್ಟು ಪ್ರತಿಭಾವಂತರು ಎನ್ನುವುದನ್ನು ನಾನು ಬಲ್ಲೆ. ಈ ಕ್ಲಬ್ ಮತ್ತು ಇದರ ಅಭಿಮಾನಿಗಳಿಗೆ ವಿಶೇಷವಾದ್ದನ್ನು ಸಾಧಿಸಲು ನಾನು ಬದ್ಧ. ಪಾರ್ಕ್ ಡೆಸ್ ಪ್ರಿನ್ಸೆಸ್‌ನಲ್ಲಿ ಮೈದಾನಕ್ಕೆ ಇಳಿಯುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಮೆಸ್ಸಿ ತಿಳಿಸಿದ್ದಾರೆ.

ಆದರೆ ಮೆಸ್ಸಿಯ ವೇತನ ಬಗ್ಗೆ ಯಾವ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ. ಮೆಸ್ಸಿ ವಾರ್ಷಿಕ ಸುಮಾರು 35 ದಶಲಕ್ಷ ಯೂರೊ (41 ದಶಲಕ್ಷ ಡಾಲರ್) ವೇತನ ಪಡೆಯಲಿದ್ದಾರೆ ಎಂದು ಒಪ್ಪಂದ ಮಾತುಕತೆಯ ಮಾಹಿತಿ ಇರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News